ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯಲ್ಲಿ ಪ್ರತ್ಯೇಕ 2 ಹಾಟ್ ಏರ್ ಬಲೂನ್ ಅಪಘಾತದಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದು, 31 ಪ್ರವಾಸಿಗರು ಗಾಯಗೊಂಡಿದ್ದಾರೆ.
ಮೊದಲಿಗೆ ಇಂಡೋನೇಷ್ಯಾದ 19 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಏರ್ ಬಲೂನ್ ಗಾಳಿಯ ಹೊಡೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡಿತ್ತು. ಬಳಿಕ ಪೈಲಟ್ ಏರ್ ಬಲೂನ್‌ನನ್ನು ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರೂ, ಪ್ರವಾಸಿಗಲು ಏರ್ ಬಲೂನ್‌ನ ಬುಟ್ಟಿಯಿಂದ ಬಿದ್ದು, ಹಗ್ಗಗಳಲ್ಲಿ ಸಿಲುಕಿಕೊಂಡು ಗಾಯಗೊಂಡರು. ಆದರೆ ಏರ್ ಬಲೂನ್‌ನ ಬುಟ್ಟಿಯಲ್ಲಿಯೇ ಸಿಲುಕಿ ಪೈಲಟ್ ಮೃತಪಟ್ಟರು.
ಈ ಘಟನೆ ನಡೆದ ಬಳಿಕ ಅದೇ ಸ್ಥಳದಿಂದ ಹೊರಟ ಹಾಟ್ ಏರ್ ಬಲೂನ್ ಹಾರ್ಡ್ ಲ್ಯಾಂಡಿಂಗ್‌ನಿಂದಾಗಿ ಏರ್ ಬಲೂನ್‌ನಲ್ಲಿದ್ದ 12 ಪ್ರವಾಸಿಗರು ಗಾಯಗೊಂಡರು ಎಂದು ವರದಿಯಾಗಿದೆ.
ಕಳೆದ ತಿಂಗಳು, ಮೆಕ್ಸಿಕನ್‌ನ 40 ವರ್ಷದ ವ್ಯಕ್ತಿಯೊಬ್ಬರು ಹಾಟ್ ಏರ್ ಬಲೂನ್ ದುರಂತದಲ್ಲಿ ಸಾವನ್ನಪ್ಪಿದ್ದರು. ಘಟನೆಯ ದೃಶ್ಯವು ಪ್ರವಾಸಿಗರ ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು.