BCCIಗೆ ದೊಡ್ಡ ಹೊಡೆತ! ಕೊಚ್ಚಿ ಟಸ್ಕರ್ಸ್ ಪರ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟ್ ಪ್ರೇಮಿಗಳಿಗೆ ಇದು ಸ್ವಲ್ಪ ಅಚ್ಚರಿಯ ವಿಷಯವೇ ಆಗಬಹುದು – ಬಿಸಿಸಿಐಯೊಂದು ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾಡಿಕೊಂಡ ಒಪ್ಪಂದದ ವಿಚಾರ ಇದೀಗ ಮತ್ತೆ ಸುದ್ದಿಯಲ್ಲಿದೆ. ಇದೇ 2025ರ ಜೂನ್ 18 ರಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ನಿಜಕ್ಕೂ ಬಿಸಿಸಿಐಗೆ ದೊಡ್ಡ ಹೊಡೆತ ಬಿದ್ದಿದೆ.

ಇದು 14 ವರ್ಷಗಳ ಹಳೆಯ ವಿವಾದ. 2010ರಲ್ಲಿ ಬಿಸಿಸಿಐ, ಕೊಚ್ಚಿ ಟಸ್ಕರ್ಸ್ ಕೇರಳ (Kochi Tuskers Kerala) ಎಂಬ ಹೊಸ ಫ್ರಾಂಚೈಸಿಯನ್ನು 1,550 ಕೋಟಿಗೆ ಮಾರಾಟ ಮಾಡಿತ್ತು. ಆದರೆ 2011 ರ ಐಪಿಎಲ್ ಋತುವಿನ ನಂತರ, ಈ ತಂಡವನ್ನು ಹೊಸ ಬ್ಯಾಂಕ್ ಗ್ಯಾರಂಟಿಯನ್ನು ನೀಡದಿರುವ ಕಾರಣ ಟೂರ್ನಿಯಿಂದ ತೆಗೆದುಹಾಕಲಾಯಿತು. ಆದರೆ ಕೊಚ್ಚಿ ಟೀಮ್‌ನ ಮಾಲೀಕರು ಬಿಸಿಸಿಐ ನಡೆದು ಬಂದ ರೀತಿ ಒಪ್ಪಂದ ಉಲ್ಲಂಘನೆಯಾಗಿದ್ದು, ತಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ವಾದಿಸಿದ್ದರು.

ಈ ಹಿನ್ನಲೆಯಲ್ಲಿ, 2012ರಲ್ಲಿ ಕೊಚ್ಚಿ ಫ್ರಾಂಚೈಸಿ ಮಾಲೀಕರು ಮಧ್ಯಸ್ಥಿಕೆ ಪ್ರಕ್ರಿಯೆ ಪ್ರಾರಂಭಿಸಿದರು. 2015ರಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಸಿ. ಲಹೋಟಿ ನೇತೃತ್ವದ ಟ್ರಿಬ್ಯೂನಲ್ ಬಿಸಿಸಿಐ ವಿರುದ್ಧ ತೀರ್ಪು ನೀಡಿ 538 ಕೋಟಿ ಪಾವತಿಸಲು ಆದೇಶಿಸಿತ್ತು.

ಬಿಸಿಸಿಐ ಈ ತೀರ್ಪು ವಿರೋಧಿಸಿ ಬಾಂಬೆ ಹೈಕೋರ್ಟ್‌ಗೆ ಹೋದರೂ, ಈ ವಾರ ನ್ಯಾಯಮೂರ್ತಿ ಆರ್.ಐ. ಚಾಗ್ಲಾ ನೇತೃತ್ವದ ಏಕಸದಸ್ಯ ಪೀಠ ಟಸ್ಕರ್ಸ್ ಪರ ತೀರ್ಪನ್ನು ಎತ್ತಿಹಿಡಿದಿದೆ. “ಬಿಸಿಸಿಐ ಕೊಚ್ಚಿ ಫ್ರಾಂಚೈಸಿಯನ್ನು ವಜಾ ಮಾಡಿದ್ದು ಒಪ್ಪಂದದ ನಿರಾಕರಣೆಯ ಉಲ್ಲಂಘನೆಯಾಗಿದೆ ಎಂಬ ಮಧ್ಯಸ್ಥಗಾರರ ತೀರ್ಮಾನವು ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ. ಇದು ದಾಖಲೆಯಲ್ಲಿರುವ ಪುರಾವೆಗಳ ಸರಿಯಾದ ಮೌಲ್ಯಮಾಪನವನ್ನು ಆಧರಿಸಿದೆ.” ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ ಬಿಸಿಸಿಐ ನೀಡಿದ್ದ 100 ಕೋಟಿ ಠೇವಣಿಯನ್ನು ವಾಪಸ್ ಪಡೆಯಲು ಕೊಚ್ಚಿ ತಂಡಕ್ಕೆ ಅನುಮತಿ ನೀಡಲಾಗಿದೆ.

ಈ ತೀರ್ಪು ಬಿಸಿಸಿಐಗೆ ಕಾನೂನು ಮಟ್ಟದಲ್ಲಿ ಮಾತ್ರವಲ್ಲ, ದೊಡ್ಡ ಮಟ್ಟದಲ್ಲಿಯೂ ಎಲ್ಲರಿಗೂ ಪಾಠವಾಗಲಿದೆ. ಆದರೆ ಕ್ರಿಕೆಟ್ ಆಡಳಿತ ಮಂಡಳಿಗೆ ಇನ್ನೂ ಮೇಲ್ಮನವಿ ಸಲ್ಲಿಸಲು 6 ವಾರಗಳ ಕಾಲಾವಕಾಶವಿದೆ. ಮುಂದೇನು ನಡೆಯಲಿದೆ ಎಂಬುದನ್ನು ಕಾಯಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!