ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಕ ಸೋನು ನಿಗಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹಾಡುಗಳಿಂದ ಅಲ್ಲ, ಅವರ ಟ್ವೀಟ್‌ನಿಂದ! ಈಗಾಗಲೇ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ಸೋನು ನಿಗಮ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯಿಂದ ತೀವ್ರ ವಿರೋಧಕ್ಕೆ ಗುರಿಯಾಗಿದ್ದಾರೆ.
ಸೋನು ನಿಗಮ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ “ ಆರ್‌ಸಿಬಿ ಐಪಿಎಲ್ ಗೆದ್ದಾಗಿನಿಂದ ಪ್ರಪಂಚದಲ್ಲಿ ಯಾವುದೂ ಒಳ್ಳೆಯದಾಗುತ್ತಿಲ್ಲ (Jabse RCB IPL jeeti hai tabse duniya mein kuch bhi achcha nahi ho raha hai!)” ಎಂಬ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ. ಈ ಹೇಳಿಕೆಯಿಂದ RCB ಅಭಿಮಾನಿಗಳು ಸಿಡಿದಿದ್ದಾರೆ. ಹಲವರು ಇದನ್ನು ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ, ಇಸ್ರೇಲ್-ಇರಾನ್ ಯುದ್ಧ, ಏರ್ ಇಂಡಿಯಾ ವಿಮಾನ ಅಪಘಾತ ಮೊದಲಾದ ದುರ್ಘಟನೆಗಳಿಗೆ ಸಂಪರ್ಕಿಸುವ ಮೂಲಕ, ಸುಮ್ಮನೇ RCB ಗೆಲುವನ್ನು ಶಾಪದಂತೆ ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯ ಸೋನು ನಿಗಮ್, ಕನ್ನಡದಲ್ಲಿ ಹಾಡು ಕೇಳಿದಕ್ಕಾಗಿ ಕನ್ನಡ ಎನ್ನುವ ಮಾತನ್ನು ಉಗ್ರರಿಗೆ ಹೋಲಿಸಿ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಅವರು ಮತ್ತೆ ಅದೇ ವರಸೆಯಲ್ಲಿ ಮಾತನಾಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು.
ಒಟ್ಟಿನಲ್ಲಿ, ಸೋನು ನಿಗಂ ಮತ್ತೊಮ್ಮೆ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುವಂತೆ ವರ್ತಿಸಿದ್ದು, ಈ ವಿವಾದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.