ಈಗ ಕೆಲಸ ಮಾಡೋದು ಸಾಲ್ತಾ ಇಲ್ವಾ? ಖಾಸಗಿ ವಲಯದ ನೌಕರರಿಗೆ 10 ಗಂಟೆ ಕೆಲಸದ ಪ್ರಸ್ತಾವನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸದ್ಯ ರಾಜ್ಯದಲ್ಲಿ ಖಾಸಗಿ ನೌಕರರಿಗೆ ಪ್ರತಿನಿತ್ಯ 8 ರಿಂದ 9 ಗಂಟೆಗಳ ಕೆಲಸದ ಅವಧಿಯನ್ನು ಫಿಕ್ಸ್ ಮಾಡಲಾಗಿದೆ. ಆದರೆ, ಈ ಕೆಲಸದ ಅವಧಿಯನ್ನು ವಿಸ್ತರಣೆ ಮಾಡಲು ಚಿಂತನೆ ನಡೆದಿದ್ದು, 8 ರಿಂದ 10 ಗಂಟೆಗೆ ಹೆಚ್ಚಿಸಲು ಚರ್ಚೆ ನಡೆದಿದೆ. ಇದು ಜನರನ್ನು ಕೆರಳಿಸಿದೆ.

ಖಾಸಗಿ ಸಂಸ್ಥೆಗಳ ಕೆಲಸದ ಸಮಯವನ್ನು ದಿನಕ್ಕೆ ಒಂಬತ್ತು ಗಂಟೆಗಳಿಂದ 10 ಗಂಟೆಗಳಿಗೆ ಹೆಚ್ಚಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಐಟಿ/ಐಟಿಇಎಸ್ ನೌಕರರ ಸಂಘ ಸೇರಿದಂತೆ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅವರು ಪ್ರತಿಭಟನೆಗಳನ್ನು ನಡೆಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವ ಸಮಯವನ್ನು ಸೇರಿಸಿದರೆ ಉದ್ಯೋಗಿಗಳು ಈಗಾಗಲೇ 10 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಈ ಸಮಯ ಇನ್ನೂ ಹೆಚ್ಚಾದರೆ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಸಂಬಂಧಗಳು, ಲೈಫ್‌ಸ್ಟೈಲ್‌ ಎಲ್ಲವೂ ಹಾಳಾಗುತ್ತದೆ ಎಂದು ಉದ್ಯೋಗಿಗಳು ಹೇಳುತ್ತಿದ್ದಾರೆ.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1961 ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆ ಇರುವುದರಿಂದ ಕಾರ್ಮಿಕ ಕಾರ್ಯದರ್ಶಿ ರೋಹಿಣಿ ಸಿಂಧೂರಿ ನೇತೃತ್ವದ ರಾಜ್ಯ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಂವಹನ ನಡೆಸಿ, ಕೆಲಸದ ಸಮಯವನ್ನು 10 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.

ಪ್ರಸ್ತಾವಿತ ತಿದ್ದುಪಡಿಯು ಕಂಪನಿಗಳು ಅಸ್ತಿತ್ವದಲ್ಲಿರುವ ಮೂರು-ಶಿಫ್ಟ್ ವ್ಯವಸ್ಥೆಯ ಬದಲಿಗೆ ಎರಡು-ಶಿಫ್ಟ್ ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ ಎಂದು ನೌಕರರು ಭಯಪಡುತ್ತಾರೆ. ಇದರರ್ಥ, ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!