ಈ ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ಗಳ ಸರಣಿಯ ಮೂಲಕ ಭಾರತ ತನ್ನ ಹೊಸ WTC ಅಭಿಯಾನ ಶುರು ಮಾಡಲಿದೆ. ಇದರ ವಿಶೇಷತೆ ಏನಂದ್ರೆ – ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯಾದ ನಂತರದ ಮೊದಲ ಟೆಸ್ಟ್ ಸರಣಿ ಇದು. ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯೋ ಮೊದಲ ಪಂದ್ಯ ಈಗಾಗಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಸಖತ್ ನಿರೀಕ್ಷೆ ಮೂಡಿಸಿದೆ.
ಈ ಮಧ್ಯೆ, ಇಂಗ್ಲೆಂಡ್ ತಂಡ ಕೂಡಾ ತಮ್ಮ ಪ್ಲೇಯಿಂಗ್ 11ನ್ನು ಅಧಿಕೃತವಾಗಿ ಅನೌನ್ಸ್ ಮಾಡಿದೆ. ಕ್ರಿಸ್ ವೋಕ್ಸ್ ತಂಡಕ್ಕೆ ಮತ್ತೆ ರೀಎಂಟ್ರಿ ಕೊಟ್ಟಿದ್ದು, ಬ್ರೈಡನ್ ಕಾರ್ಸೆ ಅವರು ತಾವು ತವರಿನಲ್ಲಿ ಆಡಲಿರುವ ಮೊದಲ ಟೆಸ್ಟ್ಗೆ ಆಯ್ಕೆಯಾಗಿದ್ದಾರೆ.
ಶೋಯೆಬ್ ಬಶೀರ್ ಅವರು ಇಂಗ್ಲೆಂಡ್ನ ಏಕೈಕ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ಬೆನ್ ಸ್ಟೋಕ್ಸ್ ಅವರು ನಾಲ್ಕನೇ ವೇಗಿ ಪಾತ್ರವನ್ನು ನಿರ್ವಹಿಸಲಿದ್ದು, ಬೌಲಿಂಗ್ ದಾಳಿಯಲ್ಲಿ ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ ಮತ್ತು ಜೋಶ್ ಟಂಗ್ ಅವರನ್ನು ಬೆಂಬಲಿಸಲಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾಗಿ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರಾಲಿ ಆಡಲಿದ್ದು, ಓಲಿ ಪೋಪ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಜೋ ರೂಟ್, ಹ್ಯಾರಿ ಬ್ರೂಕ್ ಹಾಗೂ ನಾಯಕ ಸ್ಟೋಕ್ಸ್ ಮಧ್ಯಮ ಕ್ರಮಾಂಕವನ್ನು ಭದ್ರಪಡಿಸಲಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಜೇಮೀ ಸ್ಮಿತ್ ಅವರು ಮುಂದುವರಿದಿದ್ದಾರೆ.
ಈ ಹಿಂದೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಶೋಯೆಬ್ ಬಶೀರ್ ಅವರು ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗಳೊಂದಿಗೆ ಒಟ್ಟು 9 ವಿಕೆಟ್ ಕಬಳಿಸಿದ್ದರು. ಆ ಪ್ರದರ್ಶನದ ಮುಂದುವರಿಕೆಗಾಗಿಯೇ ಇಡೀ ಸರಣಿಗೆ ಭರವಸೆಯಾಗಿ ಅವರು ಆಯ್ಕೆಯಾಗಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಫಲತೆಯ ಸಾಧನೆಗಾಗಿ ಈ ತಂಡ ರಚನೆಯಾಗಿದೆ.
ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಪಟ್ಟಿ ಈ ರೀತಿ ಇದೆ: ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್ ಮತ್ತು ಶೋಯೆಬ್ ಬಶೀರ್.