WTC ಚಾಂಪಿಯನ್‌ಶಿಪ್ | ವಿರಾಟ್ ಕೊಹ್ಲಿ ಪ್ಲೇಸ್‌ನಲ್ಲಿ ಆಡೋದು ಈ ಸ್ಟಾರ್ ಪ್ಲೇಯರ್! ಪಂತ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)ಅನ್ನು ಟೀಂ ಇಂಡಿಯಾ ಇದೇ ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ ಆರಂಭಿಸಲಿದೆ. ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರದ ತಂಡದ ಮೊದಲ ಬೃಹತ್ ಟೆಸ್ಟ್ ಸರಣಿ. ಹಾಗಾಗಿ ಈ ಸರಣಿಯಲ್ಲಿ ಯುವ ಆಟಗಾರರ ಪರ್ಫಾರ್ಮೆನ್ಸ್ ತುಂಬಾ ಮುಖ್ಯವಾಗಿರುತ್ತೆ. ವಿಶೇಷವಾಗಿ ನಾಲ್ಕನೇ ಕ್ರಮಾಂಕದ ಆಟಗಾರ ಯಾರು ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದಕ್ಕೆ ಟೀಂ ಇಂಡಿಯಾದ ಉಪನಾಯಕ ರಿಷಬ್ ಪಂತ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂತ್, “ನಾಲ್ಕನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಮಾಡ್ತಾರೆ” ಅಂತ ಖಚಿತಪಡಿಸಿದ್ದಾರೆ. ಗಿಲ್ ಈಗ ವಾಸ್ತವದಲ್ಲಿ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದರೂ, ಈ ಸರಣಿಯಲ್ಲಿ ಅವರನ್ನು ನಾಲ್ಕನೇ ಸ್ಥಾನಕ್ಕೆ ಬದಲಾಯಿಸಲಾಗಿದೆ. ಪಂತ್ ತಾವು ಹಿಂದೆ ಇದ್ದಂತೆ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದಾಗಿ ತಿಳಿಸಿದ್ದಾರೆ.

ಆದರೆ 3ನೇ ಕ್ರಮಾಂಕದ ಬಗ್ಗೆ ಪಂತ್ ಏನೂ ಸ್ಪಷ್ಟಪಡಿಸಿಲ್ಲ. “ಅದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿವೆ” ಎಂದು ಅವರು ಹೇಳಿದ್ದಾರೆ. ಇನ್ನು ಪ್ಲೇಯಿಂಗ್ XI ಕುರಿತು ಅವರು ಸ್ಪಷ್ಟನೆ ನೀಡಿಲ್ಲ. ಈ ಸ್ಥಾನಕ್ಕೆ ಕರುಣ್ ನಾಯರ್ ಅಥವಾ ಸಾಯಿ ಸುದರ್ಶನ್ ಗೆ ಅವಕಾಶ ಸಿಗಬಹುದೆಂಬ ಊಹಾಪೋಹಗಳಿವೆ.

ಹೀಗಾಗಿ ಟೀಂ ಇಂಡಿಯಾದ batting order ನಲ್ಲಿ ಮುಂದಿನ ಪಂದ್ಯದಲ್ಲಿ ಹೇಗೆ shuffle ಆಗುತ್ತೆ ಅನ್ನೋದನ್ನ ಕಾದು ನೋಡಬೇಕು. ಆದರೂ ಶುಭ್ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡ್ತಾರೆ ಅಂತ ಪಂತ್ ಹೇಳಿದ್ದು, ಈ ಕುರಿತು ಎಲ್ಲರಲ್ಲಿಯೂ ಹೆಚ್ಚಿನ ಸ್ಪಷ್ಟತೆ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!