JOB OffER | ಬ್ಯಾಂಕ್ ಉದ್ಯೋಗಿ ಆಗ್ತೀರಾ, ಫೆಡರಲ್‌ ಬ್ಯಾಂಕ್‌ ನಲ್ಲಿದೆ ಅಸೋಸಿಯೇಟ್‌ ಆಫೀಸರ್ ಆಗುವ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಮುಖ ಪ್ರೈವೇಟ್‌ ಸೆಕ್ಟರ್ ಸಂಸ್ಥೆ ಫೆಡರಲ್ ಬ್ಯಾಂಕ್‌ ಅಸೋಸಿಯೇಟ್‌ ಆಫೀಸರ್ ( ಸೇಲ್ಸ್‌‌) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆಗಳೇನು?

ಅರ್ಜಿದಾರರು 10, 12 ಮತ್ತು ಪದವಿಯಲ್ಲಿ ಕನಿಷ್ಟ ಶೇ. 50 ರಷ್ಟು ಅಂಕ ಪಡೆದಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅರ್ಜಿದಾರರು 01/06/1998 ನಂತರ ಜನಿಸಿರುವವರಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ವಾರ್ಷಿಕವಾಗಿ 4.59 ಲಕ್ಷದಿಂದ 6.19 ಲಕ್ಷದ ಒಳಗೆ ಕೆಲಸದ ಸ್ಥಳ, ಕಾರ್ಯಕ್ಷಮತೆ ಹಾಗೂ ಇನ್ನಿತರ ವಿಷಯಗಳ ಆಧಾರದ ಮೇಲೆ ಸಂಭಾವನೆ ಪಡೆಯುತ್ತಾರೆ.

ಆಯ್ಕೆ ಪ್ರಕ್ರಿಯೆ ಸೆಂಟರ್ ಬೇಸ್ಡ್‌ ಆನ್‌ಲೈನ್‌ ಆಪ್ಟಿಟ್ಯೂಡ್‌ ಪರೀಕ್ಷೆಯನ್ನು ಒಳಗೊಂಡಿದ್ದು , ಈ ಪರೀಕ್ಷೆ ಜುಲೈ 6, 2025ರಂದು ನಡೆಯಲಿದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವೈಯಕ್ತಿಕ ಸಂದರ್ಶನಕ್ಕೆ ಅರ್ಹರಾಗಿರುತ್ತಾರೆ.

ಜೂನ್‌ 22, 2025ರೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಫೆರಲ್‌ ಬ್ಯಾಂಕ್‌ನ ‘ಕರಿಯರ್‍ಸ್‌’ ಪೇಜ್‌ಗೆ 🔗 www.federalbank.co.in/career

ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

LEAVE A REPLY

Please enter your comment!
Please enter your name here

error: Content is protected !!