ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟಿ ಕಾಜೋಲ್ ಒಂದು ಹೇಳಿಕೆಯಿಂದ ಟಾಲಿವುಡ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಮುಂದಿನ ಹೊಸ ಮೈಥಲಾಜಿಕಲ್ ಹಾರರ್ ಸಿನಿಮಾ ‘ಮಾ’ ಚಿತ್ರದ ಪ್ರಚಾರದ ವೇಳೆ ಅವರು ಕೊಟ್ಟ ಸಂದರ್ಶನದಲ್ಲಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ (Ramoji Film City) ಬಗ್ಗೆ ಮಾಡಿದ ಕಾಮೆಂಟ್ ಮಾಡಿದ್ದೂ ಈಗ ಅದು ಎಲ್ಲೆಡೆ ವೈರಲ್ ಆಗಿದೆ.
ಕಾಜೋಲ್ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಾ, ರಾಮೋಜಿ ಫಿಲಂ ಸಿಟಿಯನ್ನು “ಭೂತಗಳ ಕೋಟೆ” ಎಂದು ಕರೆದಿದ್ದಾರೆ. ಈ ಹೇಳಿಕೆಯಿಂದಲೇ ಇಡೀ ಸೋಷಿಯಲ್ ಮೀಡಿಯಾ ತಲೆಕೆಡಿಸಿಕೊಳ್ಳುತ್ತಿದೆ.
“ನಾನು ಒಂದು ಸಿನಿಮಾದ ಚಿತ್ರೀಕರಣಕ್ಕಾಗಿ ರಾಮೋಜಿ ಫಿಲಂ ಸಿಟಿಗೆ ಹೋಗಿದ್ದೆ. ಅಲ್ಲಿ ಕೆಲವೊಂದು ಸ್ಥಳಗಳು ತುಂಬಾ ಭಯಾನಕವಾಗಿವೆ. ಕೆಲವೊಮ್ಮೆ ವಿಚಿತ್ರ ಶಬ್ದಗಳು, ಅಸಹಜ ಅನುಭವಗಳು ಆಗುತ್ತಿವೆ ಅನಿಸುತ್ತಿತ್ತು. ಅಷ್ಟು ಭಯವಾಗಿತ್ತು, ಮತ್ತೆ ನಾನು ಆ ಸ್ಥಳಕ್ಕೆ ಹೋಗಲ್ಲ” ಎಂದು ಅವರು ಹೇಳಿದ್ದಾರೆ.
ಕಾಜೋಲ್ ಈ ಹೇಳಿಕೆ ಕೊಟ್ಟಿದ್ದು ಸಾಮಾನ್ಯವಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳುವ ಉದ್ದೇಶದಿಂದ. ಆದರೆ ನೆಟ್ಟಿಗರು, “ಭಾರತದಲ್ಲಿಯೇ ಅತ್ಯುತ್ತಮ ಸ್ಟುಡಿಯೋಗಳಲ್ಲಿ ಒಂದಾದ ರಾಮೋಜಿಗೆ ಹೇಗೆ ಇಂಥ ಹೇಳಿಕೆ ಕೊಡಬಹುದು?” ಎಂದು ಪ್ರಶ್ನೆ ಎತ್ತಿದ್ದಾರೆ. ಇನ್ನೊಬ್ಬರ ಅಭಿಪ್ರಾಯ – “ಸಾಮಾನ್ಯ ಅನುಭವವನ್ನೂ ಬಹಿರಂಗಪಡಿಸೋದು ತಪ್ಪಲ್ಲ, ಆದರೆ ಇಂಥದೇ ಜಾಗದಲ್ಲಿ ಸಾವಿರಾರು ಸಿನಿಮಾಗಳ ಶೂಟಿಂಗ್ ನಡೆಯುತ್ತೆ. ಅದಕ್ಕೇನಾದ್ರೂ ಸಮಸ್ಯೆ ಇರುತ್ತಿದ್ರೆ ಇಷ್ಟು ವರ್ಷ ಯಾರೂ ಏನು ಹೇಳಿರಲಿಲ್ಲ. ಏಕೆ ಈಗ ಕಾಜೋಲ್ ಮಾತ್ರ?” ಎಂದು ಪ್ರಶ್ನಿಸಿದ್ದಾರೆ.
ಕಾಜೋಲ್ ನೀಡಿರುವ ಈ ಹೇಳಿಕೆ ರಾಮೋಜಿ ಫಿಲಂ ಸಿಟಿ ವಿರುದ್ಧ ಒಂದಿಷ್ಟು ತೀವ್ರ ವಾದ-ವಿವಾದಕ್ಕೆ ಕಾರಣವಾಗ್ತಿದೆ. ಅವರು ಭಾವನಾತ್ಮಕವಾಗಿ ತಮ್ಮ ಅನುಭವ ಹಂಚಿಕೊಂಡಿದ್ದರೂ, ಇದು ಟಾಲಿವುಡ್‌ನಲ್ಲಿ ಬೇಜವಾಬ್ದಾರಿಯ ಮಾತಾಗಿ ಕಾಣಿಸಿಕೊಳ್ಳುತ್ತಿದೆ. ಮುಂದೆ ಈ ವಿವಾದ ಏನಾಗುತ್ತೆ ಅಂತ ಕಾದು ನೋಡಬೇಕಿದೆ.