Relationship | ನವ ವಿವಾಹಿತ ಜೋಡಿಗಳಿಗೊಂದು ಕಿವಿ ಮಾತು! ಈ 5 ತಪ್ಪುಗಳು ನಿಮ್ಮ ದಾಂಪತ್ಯ ಜೀವನ ಹಾಳುಮಾಡಬಹುದು ಜೋಕೆ

ಮದುವೆ ಎಂದರೆ ಕೇವಲ ಸಡಗರ, ಉತ್ಸವವಲ್ಲ. ಅದು ಜೀವನದ ಎರಡನೇ ಅಧ್ಯಾಯ. ಒಂಟಿತನಕ್ಕೆ ವಿದಾಯ ಹೇಳಿ, ಒಬ್ಬರಿಗೊಬ್ಬರ ಜತೆ ಜೀವನವನ್ನ ಹಂಚಿಕೊಳ್ಳುವ ಘಳಿಗೆ. ಆದ್ರೆ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಪ್ರತಿ ಹಂತವೂ ಹೊಸದು, ಅರ್ಥಮಾಡಿಕೊಳ್ಳಬೇಕಾದದ್ದು, ಹೊಂದಿಕೊಳ್ಳಬೇಕಾದದ್ದು. ಆ ಸಮಯದಲ್ಲಿ ಕೆಲವು ಸಣ್ಣ ತಪ್ಪುಗಳು ಸಹ ದಾಂಪತ್ಯ ಜೀವನದ ಸುಖಕ್ಕೆ ತೊಂದರೆ ತರಬಹುದು.

ಪರಿಪೂರ್ಣತೆ ನಿರೀಕ್ಷೆ ಮಾಡಬೇಡಿ
ಎಲ್ಲರಲ್ಲಿಯೂ ಯಾವುದಾದ್ರೊಂದು ಲೋಪ ಇದ್ದೆ ಇದೆ. ಸಂಗಾತಿಯಿಂದ ಎಲ್ಲಾ ಕೆಲಸ ಪರ್ಫೆಕ್ಟ್ ಆಗಿರಲಿ ಅಂತ ನಿರೀಕ್ಷೆ ಮಾಡೋದು ಅವನ/ಅವಳ ಮೇಲೆ ಒತ್ತಡ ತರುತ್ತದೆ. ಬದಲಾಗಿ, ಅವರ ಶೈಲಿ, ಅಭಿಪ್ರಾಯ, ಹವ್ಯಾಸಗಳನ್ನ ಒಪ್ಪಿಕೊಳ್ಳಿ. ಹೊಂದಾಣಿಕೆ ಇಲ್ಲದಿದ್ದರೆ, ಜಗಳಕ್ಕೆ ಕಾರಣವಾಗಬಹುದು.

14 Indian Wedding and Ceremony Traditions

 

ಸಂಬಂಧದಲ್ಲಿ ಸಂಭಾಷನೆ ಮೊದಲು
ಹೊಸದಾಗಿ ಮದುವೆಯಾದ ದಂಪತಿಗಳು ಪರಸ್ಪರ ಜಾಸ್ತಿ ಮಾತನಾಡಿಕೊಳ್ಳಬೇಕು. ಇಬ್ಬರ ನಡುವೆ ಉತ್ತಮ ಸಂವಹನ ಆದಾಗ ಬಾಂಧವ್ಯ ಬೆಳೆಯಲು ಸಹಕಾರಿಯಾಗುತ್ತದೆ. ನಿಮ್ಮ ಭಾವನೆಗಳು, ಬೇಸರಗಳು, ಆಸೆ-ಆಕಾಂಕ್ಷೆಗಳನ್ನು ಸರಳವಾಗಿ ಹಂಚಿಕೊಳ್ಳಿ.

Ask These 42 Relationship Questions Before Getting Serious

ಹೋಲಿಕೆ – ಸಂಬಂಧದ ಶತ್ರು
“ಅವನು ಆ ಥರ ಇರುತ್ತಾನೆ”, “ಅವಳು ಅಷ್ಟು ಚನ್ನಾಗಿ ಅಡುಗೆ ಮಾಡ್ತಾಳೆ” – ಇಂಥ ಹೋಲಿಕೆಗಳನ್ನು ನಿಲ್ಲಿಸಿ. ಇದು ಸಂಬಂಧಕ್ಕೆ ತುಂಬಾ ಮಾರಕ. ಸಂಗಾತಿಯ ಒಳ್ಳೆತನ, ಶಕ್ತಿಗಳು, ದೌರ್ಬಲ್ಯಗಳನ್ನ ತಮ್ಮದೇ ಆದ ದೃಷ್ಠಿಯಿಂದ ನೋಡುವುದು ಮುಖ್ಯ.

Is It Ever A Good Idea To Compare Your Partner To Others In A Relationship?

ಬೇರೆ ಜನರ ಹಸ್ತಕ್ಷೇಪ ಬೇಡ
ಅಮ್ಮ, ಅಪ್ಪ, ಅತ್ತೆ, ಮಾವ ಎಲ್ಲರ ಮಾತು ಕೇಳ್ಬೇಕು ಅನ್ನು ಅವಶ್ಯಕತೆ ಇಲ್ಲ. ಇವರ ಮಾತುಗಳು ನಿಮ್ಮಿಬ್ಬರ ನಡುವೆ ನಡೆಯೋ ಸಂಭಾಷನೆಯ ಅರ್ಥವೇ ಇಲ್ಲದಂತಾಗಬಹುದು. ಸಂಬಂಧದ ಗೌಪ್ಯತೆ ಕಾಪಾಡಿ. ತಾನಾಗಿ ಸಲಹೆ ಕೇಳಿದಾಗ ಮಾತ್ರ ಕೇಳಿ.

Stop Comparing Your Life To Others Immediately

ನಿಮ್ಮತನ ಉಳಿಸಿಕೊಳ್ಳಿ
ಮದುವೆಯಾದ ತಕ್ಷಣ ನಿಮ್ಮ ಸ್ವತಂತ್ರ ಅಸ್ತಿತ್ವವನ್ನ ದಾನ ಮಾಡ್ಬೇಡಿ. ಇಷ್ಟವಾದ ಸಂಗತಿಗಳನ್ನು ಬಿಟ್ಟುಕೊಡಬೇಡಿ. ಗಂಡ ಹೆಂಡತಿ ಒಬ್ಬರಿಗಾಗಿ ಒಬ್ಬರು ಬದಲಾಗಬಾರದು, ಬದಲಿಗೆ ಇಬ್ಬರೂ ಒಬ್ಬರನ್ನ ಒಬ್ಬರು ಒಪ್ಪಿಕೊಳ್ಳಬೇಕು. ಏಕೆಂದರೆ, ಇಬ್ಬರ ಪ್ರಾಮಾಣಿಕತ್ವ ಮತ್ತು ಸ್ಪಷ್ಟತೆ ಬಂಧವನ್ನು ಬಲಪಡಿಸುತ್ತದೆ.

WoW: Five Ways to Start Pleasing Yourself | Martha Borst :: Organizational  Consultation and Coaching

ಮದುವೆ ಅಂದರೆ ಒಳ್ಳೆಯ ಸಂಬಂಧದ ಆರಂಭ. ಅದನ್ನು ಉಳಿಸಿಕೊಳ್ಳೋದು, ಬೆಳೆಸೋದು ನಿಮ್ಮಿಬ್ಬರ ಕೈಯಲ್ಲಿದೆ. ಒಂದಿಷ್ಟು ಎಚ್ಚರ, ಒಂದಿಷ್ಟು ಸಹನೆ, ಮತ್ತು ತುಂಬಾ ಮಾತುಕತೆ ಇವೆ ಮದುವೆಯ ಸಿಹಿಯಾದ ರಹಸ್ಯಗಳು!

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!