ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ಧನುಷ್ ಅಭಿನಯದ ಕುಬೇರ ಸಿನಿಮಾ ಪ್ರಮೋಷನ್ಸ್ ನಡೆಯುತ್ತಿದೆ. ಈ ವೇಳೆ ರಶ್ಮಿಕಾಗೆ ಎಲ್ಲರೂ ಲಕ್ಕಿ ಎಂದು ಹೇಳುತ್ತಾರೆ, ಆದರೆ ಅವರು ಲಕ್ಕಿ ಅಲ್ಲ! ಲಕ್ ಜೊತೆ ಹಾರ್ಡ್ ವರ್ಕ್ ಕೂಡ ಇದೆ ಎಂದು ನಟ ಧನುಷ್ ಹೇಳಿದ್ದಾರೆ.
ರಶ್ಮಿಕಾ ನೀವು 1000 ಕೋಟಿ ರೂಪಾಯಿ, 2000 ಕೋಟಿ ರೂಪಾಯಿ, ನ್ಯಾಷನಲ್ ಕ್ರಶ್ ಇದನ್ನೆಲ್ಲ ಮರೆತುಬಿಡಿ. ನೀವು ತುಂಬಾ ಅದೃಷ್ಟವಂತೆ ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ, ನಿಮ್ಮ ಅದೃಷ್ಟವನ್ನು ನೀವೇ ಸೃಷ್ಟಿಸಿಕೊಂಡಿರೋದು ಎಂದು ಅವರು ಹೇಳಿದ್ದಾರೆ.
ನಿಮಗೆ ಏನೆಲ್ಲ ಟ್ಯಾಗ್ ಸಿಕ್ಕಿದೆಯೋ ಅದನ್ನು ಪಡೆಯಲು ನೀವು ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡಿದ್ದೀರಿ. ನಿಮ್ಮ ಸಿನಿಮಾ 2000 ಕೋಟಿ ರೂಪಾಯಿ ಮಾಡಿದೆ. ನಿಮ್ಮ ಅದೃಷ್ಟವನ್ನು ನೀವೇ ಪಡೆದುಕೊಂಡಿದ್ದೀರಿ. ಕೊಡಗಿನ ಸಣ್ಣ ಹುಡುಗಿಯಾಗಿದ್ದ ನೀವು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದೀರಿ. ಈ ಪ್ರಯಾಣ ನಿಜಕ್ಕೂ ಅದ್ಭುತ. ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಫ್ಯೂಚರ್ ಪ್ರಾಜೆಕ್ಟ್ಗೆ ಆಲ್ ದಿ ಬೆಸ್ಟ್ ಎಂದರು ಅವರು.