ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಅಭಿಮಾನಿಗಳ ದಿಟ್ಟ ನಿರೀಕ್ಷೆಗಳಿಗೆ ಕಾರಣವಾಗಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಆರಂಭವಾಗಲಿದೆ. ಹೆಡಿಂಗ್ಲಿಯಲ್ಲಿ ನಡೆಯಲಿರುವ ಈ ಮೊದಲ ಪಂದ್ಯದಿಂದಲೇ ಭಾರತ ಹೊಸ ಅಧ್ಯಾಯದತ್ತ ಹೆಜ್ಜೆ ಇಡುತ್ತಿದೆ. ಈ ಬಾರಿ ನಾಯಕತ್ವದ ಹೊಣೆಯನ್ನು ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ ಹೊತ್ತಿದ್ದು. ಅವರು ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್ಮನ್ ಆಗಿಯೂ ಯಶಸ್ಸುಗಳಿಸಬೇಕಿದೆ.
ಈ ಪಂದ್ಯ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025-27 (WTC) ರ ಮೊದಲ ಪಂದ್ಯವಾಗಿದ್ದು, ಉತ್ತಮ ಪ್ರಾರಂಭ ನೀಡುವುದು ಭಾರತ ತಂಡಕ್ಕೆ ಅತ್ಯಂತ ಮುಖ್ಯವಾಗಿದೆ.
IND vs ENG ಮೊದಲ ಟೆಸ್ಟ್ ಪಂದ್ಯ ಮಾಹಿತಿಗಳು:
ದಿನಾಂಕ: ಜೂನ್ 20, ಶುಕ್ರವಾರ
ಸ್ಥಳ: ಹೆಡಿಂಗ್ಲಿ, ಇಂಗ್ಲೆಂಡ್
ಪಂದ್ಯ ಆರಂಭ: ಮಧ್ಯಾಹ್ನ 3:30 (ಭಾರತೀಯ ಕಾಲಮಾನ)
ಟಾಸ್ ಸಮಯ: ಮಧ್ಯಾಹ್ನ 3:00
ನೇರ ಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್:
ಟಿವಿಯಲ್ಲಿ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಮೊಬೈಲ್ ಮತ್ತು ಇಂಟರ್ನೆಟ್ನಲ್ಲಿ: ಜಿಯೋ ಹಾಟ್ಸ್ಟಾರ್ OTT
ಭಾರತೀಯ ತಂಡದ ಸಂಪೂರ್ಣ ಪಟ್ಟಿ:
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೀ), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.
ಇಂಗ್ಲೆಂಡ್ ತಂಡ:
ಬೆನ್ ಸ್ಟೋಕ್ಸ್ (ನಾಯಕ), ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್ (ವಿಕೀ), ಜೋಶ್ ಟಂಗ್, ಕ್ರಿಸ್ ವೋಕ್ಸ್.