ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳವಷ್ಟು ದಾರಿದ್ರ್ಯ ಇನ್ನೂ ನನಗೆ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನನಗೆ ಅವರಿಂದ ಬಟ್ಟೆ ತೆಗೆದುಕೊಳ್ಳೋ ದರಿದ್ರ ಬಂದಿಲ್ಲ. ಅದು ಜನರ ದುಡ್ಡನ್ನ ಲೂಟಿ ಮಾಡಿ ಸಂಪಾದನೆ ಮಾಡ್ತಿರೋ ಪಾಪದ ಹಣ. ಪಾಪದ ಹಣದಿಂದ ಬಟ್ಟೆ ತೆಗೆದುಕೊಳ್ಳೋ ದರಿದ್ರ ಪರಿಸ್ಥಿತಿ ನನಗೆ ಬಂದಿಲ್ಲ, ನನಗೆ ಬಟ್ಟೆ ಬೇಕು ಅಂದ್ರೆ ನನ್ನ ಜನರೇ ಕೊಡಿಸ್ತಾರೆ ಅಂತಾ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
2028ಕ್ಕೆ ಜೆಡಿಎಸ್-ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್ ಕುಮಾರಸ್ವಾಮಿಗೆ ಹೊಸ ಜುಬ್ಬಾ ಪಂಚೆ ಕೊಡಿಸುತ್ತೇನೆ ಎಂದು ಹೇಳಿದ್ದರು.