ಹೊಸದಿಗಂತ ಯಲ್ಲಾಪುರ :
ತಾಲೂಕಿನ ಚಿಕ್ಕಮಾವಳ್ಳಿಯ ಇಂಡಿಯಾ ಗೇಟ್ ಹೋಟೆಲ ಎದುರು ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸಾವು ಕಂಡಿದ್ದ ಘಟನೆಯಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿ ತಲೆಮರೆಸಿಕೊಂಡಿದ್ದ ವಾಹನ ಚಾಲಕನನ್ನು ಯಲ್ಲಾಪುರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರಿನ ಶೀತಲಾಪ್ರಸಾದ ಅಲಗೂ ಬಿಂದ್ (49) ಎಂಬುವ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಅಪಘಾತದಲ್ಲಿ ಧಾರವಾಡ ಜಿಲ್ಲೆ ಕಲಘಟಗಿಯ ಬೈಕ್ ಸವಾರ, ರಾಮು ಮಾರುತಿ ಗುಜಲೂರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿಯ ಸವಾರ ವಿಷ್ಣು ಜಯಪ್ಪ ಗುಜಲೂರಗೆ ಗಾಯವಾಗಿತ್ತು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೂಡ ಸಾವನ್ನಪ್ಪಿದ್ದ. ಹೀಗಾಗಿ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಐ ರಮೇಶ ಹನಾಪುರ ಇವರ ನೇತ್ರತ್ವದಲ್ಲಿ ಪಿಎಸ್ಐ ರವರುಗಳಾದ ಯಲ್ಲಾಲಿಂಗ ಕುನ್ನೂರ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಯವರಾದ ಮಹಮ್ಮದ ಶಫೀ, ಧರ್ಮಾ ನಾಯ್ಕ ಗಿರೀಶ್ ಲಮಾಣಿ. ಶೋಭಾ ನಾಯ್ಕ ಶಿಲ್ಪಾ ಗೌಡ ಇವರು ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.