ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ (ಜೂನ್ 22) ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಬಿಎಂಆರ್ಸಿಎಲ್ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಹಸಿರು ಮಾರ್ಗದ ಸಂಚಾರಕ್ಕೆ ಯಾವುದೇ ವ್ಯತ್ಯಯವಿಲ್ಲ. ಕೇವಲ ನೇರಳೆ ಮಾರ್ಗದಲ್ಲಿ ಮಾತ್ರ ಸಂಚಾರ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಟ್ರಿನಿಟಿ ಸರ್ಕಲ್ ಹಾಗೂ ಹಲಸೂರು ನಡುವೆ ನಿಗದಿತ ನಿರ್ವಾಹಣ ಕಾರ್ಯ ನಡೆಯಲಿದೆ. ಬೈಯಪ್ಪನಹಳ್ಳಿಯಿಂದ ಕಾಡುಗೋಡಿವರೆಗೂ ಹಾಗೂ ಚಲಘಟ್ಟದಿಂದ ಎಂಜಿ ರಸ್ತೆವರೆಗೂ ಮೆಟ್ರೋ ಸಂಚಾರ ಇರಲಿದೆ.