WTC 2025-27: ಜೈಸ್ವಾಲ್​​, ಕ್ಯಾಪ್ಟನ್ ಗಿಲ್ ಭರ್ಜರಿ ಪ್ರದರ್ಶನ, ಮೊದಲ ದಿನವೇ ಹೆಡಿಂಗ್ಲೆಯಲ್ಲಿ ಆರ್ಭಟಿಸಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

4ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಭಾಗವಾಗಿ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಮೊದಲ ದಿನದಾಟದ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿದೆ.

ಅರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 91 ರನ್‌ಗಳ ದಾಖಲೆ ಜೊತೆಯಾಟ ನಡೆಸಿದರು. ಇದು 1986ರಲ್ಲಿ ಈ ಮೈದಾನದಲ್ಲಿ ಸುನಿಲ್ ಗವಾಸ್ಕರ್ ಹಾಗೂ ಶ್ರೀಕಾಂತ್ ಹೊಂದಿದ್ದ 64 ರನ್‌ಗಳ ದಾಖಲೆಯನ್ನು ಮೀರಿಸಿದೆ. ಈ ಜೊತೆಯಾಟವು ಭಾರತಕ್ಕೆ ಆರಂಭಿಕ ಸೆಷನ್‌ನಲ್ಲೇ ಭದ್ರ ಅಡಿಪಾಯವನ್ನು ಒದಗಿಸಿತು. ಆದರೆ ಎರಡು ಬ್ಯಾಕ್ ಟು ಬ್ಯಾಕ್ ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡಿತು.

ಜೈಸ್ವಾಲ್ ಇನ್ನೊಂದು ಶತಕದ ಸಾಧನೆ
ಲಂಚ್ ವೇಳೆಗೆ 44 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಜೈಸ್ವಾಲ್, ತಮ್ಮ ಆಕರ್ಷಕ ಶತಕದೊಂದಿಗೆ ತಂಡವನ್ನು ಭದ್ರವಾಗಿರಿಸಿದ್ದಾರೆ. ತಮ್ಮ ವಿದೇಶಿ ಟೆಸ್ಟ್ ಶತಕಗಳ ಪಟ್ಟಿ 3ಕ್ಕೆ ಏರಿಸಿಕೊಂಡ ಅವರು ಈ ಪಂದ್ಯದಲ್ಲಿ 158 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 101 ರನ್ ಗಳಿಸಿ ಔಟ್ ಆದರು.

ಗಿಲ್-ಪಂತ್ ಜೋಡಿ ಅಬ್ಬರ
ನಾಯಕ ಶುಭ್ಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ 4ನೇ ವಿಕೆಟ್‌ಗೆ 138 ರನ್‌ಗಳ ಸಹಭಾಗಿತ್ವ ದಾಖಲಿಸಿದರು. ಗಿಲ್ 175 ಎಸೆತಗಳಲ್ಲಿ ಅಜೇಯ 127 ರನ್ ಬಾರಿಸಿದರೆ, ಪಂತ್ 102 ಎಸೆತಗಳಲ್ಲಿ 65 ರನ್ ಗಳಿಸಿದರು. ಈ ಮೂಲಕ ಭಾರತ ಎರಡನೇ ದಿನಕ್ಕೂ ಉತ್ತಮ ಆಟ ಪ್ರದರ್ಶಿಸಲು ಭದ್ರ ಅಡಿಪಾಯ ಹಾಕಿದೆ.

ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 43 ರನ್‌ಗೆ 2 ವಿಕೆಟ್ ಪಡೆದರೆ, ಬ್ರಿಡನ್ ಕಾರ್ಸ್ ಅವರಿಗೆ 1 ವಿಕೆಟ್ ಸಿಕ್ಕಿತು. ಎರಡನೇ ದಿನ ಭಾರತ ತನ್ನ ಇನಿಂಗ್ಸ್‌ನ್ನು ಮತ್ತಷ್ಟು ಬಲಪಡಿಸಲು ನಿರೀಕ್ಷೆಯಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!