ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೇಷ ಭಾಷಣ ಯಾರೇ ಮಾಡಿದ್ರು ಸರ್ಕಾರ ಸುಮ್ಮನೆ ಇರೋದಕ್ಕೆ ಆಗುವುದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸರ್ಕಾರ ನೊಟೀಸ್ ನೀಡಿದ ಕ್ರಮವನ್ನು ಸಚಿವ ದಿನೇಶ್ ಗುಂಡೂರಾವ್ ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸರ್ಕಾರದಿಂದ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಇರೋಕೆ ಆಗುತ್ತಾ? ಯಾರೇ ದ್ವೇಷ ಭಾಷಣ ಮಾಡಿದ್ರು ನೊಟೀಸ್ ಜಾರಿ ಆಗುತ್ತದೆ. ನಾನೇ ದ್ವೇಷ ಭಾಷಣ ಮಾಡಿದ್ರು ನನಗೂ ನೋಟೀಸ್ ಜಾರಿ ಆಗುತ್ತದೆ ಎಂದಿದ್ದಾರೆ.