Personal Hygiene | ಟೀನೇಜ್‌ ಬಾಯ್ಸ್‌ ಇಲ್ಲಿ ಕೇಳಿ! ಹೈಜೀನ್‌ ಮೇಂಟೈನ್ ಮಾಡೋಕೆ ನಾವು ಟಿಪ್ಸ್ ಕೊಡ್ತೀವಿ!

ಟೀನೇಜ್‌ ಅನ್ನೋ ಟೈಮ್ ಮಾನಸಿಕ, ದೈಹಿಕ ಹಾಗೂ ಹಾರ್ಮೋನಲ್ ಬದಲಾವಣೆಗಳ ಕಾಲ. ಈ ಸಮಯದಲ್ಲಿ ಹುಡುಗಿಯರ ದೇಹದಲ್ಲಿ ಯಾವರೀತಿ ಬದಲಾವಣೆ ಆಗತ್ತೋ ಹಾಗೇ ಹುಡುಗರ ದೇಹದಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಚರ್ಮದ ಸಮಸ್ಯೆಗಳು, ದುರ್ಗಂಧ, ಖಾಸಗಿ ಅಂಗಗಳಲ್ಲಿ ಕೂದಲ ಬೆಳವಣಿಗೆ ಮುಂತಾದವು. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಬಹಳ ಮುಖ್ಯ.

ಸರಿಯಾದ ಹೈಜೀನ್ ಅಭ್ಯಾಸಗಳು ಟೀನೇಜ್‌ ಹುಡುಗರ ಆತ್ಮವಿಶ್ವಾಸ, ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಹಂತದಲ್ಲಿ ಉತ್ತಮ ಹೈಜೀನ್ ರೂಢಿಸಿಕೊಂಡರೆ ಇಡೀ ಜೀವನಕ್ಕೆ ಸಹಾಯವಾಗುತ್ತದೆ.

ಪ್ರತಿದಿನ ಸ್ನಾನ ಮಾಡುವುದು:
ಹಾರ್ಮೋನಲ್ ಬದಲಾವಣೆಗಳಿಂದ ಶರೀರದಲ್ಲಿ ಬೆವರು ಮತ್ತು ಚರ್ಮದಲ್ಲಿ ತೈಲ ಉತ್ಪಾದನೆ ಹೆಚ್ಚಾಗುತ್ತದೆ. ಪ್ರತಿದಿನ ಕ್ಲೀನಾಗಿ ಸ್ನಾನ ಮಾಡುವುದರಿಂದ ದುರ್ಗಂಧ, ಸ್ಕಿನ್ ಸಮಸ್ಯೆಗಳು ದೂರವಾಗುತ್ತವೆ.

How to bathe? - The Hindu

ಮುಖದ ಸ್ವಚ್ಛತೆ ಕಾಪಾಡಿಕೊಳ್ಳಿ:
ಮುಖ ತೊಳೆಯುವುದು ಬೆಳಿಗ್ಗೆ ಮತ್ತು ರಾತ್ರಿ ಕಡ್ಡಾಯ. ಪಿಂಪಲ್ಸ್, ಆಯಿಲ್ ಸ್ಕಿನ್ ತಪ್ಪಿಸಲು ಸೂಕ್ತವಾದ ಫೇಸ್‌ವಾಷ್ ಬಳಸಿ.

Personal hygiene for autistic teenagers | Raising Children Network

ಇನ್ನರ್ ವೇರ್ ಸ್ವಚ್ಛವಾಗಿರಲಿ:
ಶರೀರಕ್ಕೆ ನಿಕಟವಾದ ಬಟ್ಟೆಗಳನ್ನು ಪ್ರತಿದಿನ ಬದಲಾಯಿಸಿ, ತೊಳೆದು ಹಾಕುವುದು ಆರೋಗ್ಯಕರ. ಬಟ್ಟೆಗಳಲ್ಲಿ ದುರ್ಗಂಧ ಮತ್ತು ಬ್ಯಾಕ್ಟೀರಿಯಾ ತಡೆಗಟ್ಟಲು ಇದು ಮುಖ್ಯ.

How to Wash Underwear + Underwear Care Tips | Tommy John

ಎರಡು ಬಾರಿ ಹಲ್ಲು ತೊಳೆಯುವುದು:
ದಿನಕ್ಕೆ ಎರಡು ಬಾರಿ ಹಲ್ಲು ತೊಳೆಯುವುದು, ಮತ್ತು ಬಾಯಿಯ ದುರ್ಗಂಧ ತಪ್ಪಿಸಲು ಗಾರ್ಗಲ್ ಅಥವಾ ಮೌತ್‌ವಾಷ್ ಬಳಸುವುದು ಮುಖ್ಯ.

3,000+ Teen Brushing Teeth Stock Photos, Pictures & Royalty-Free Images -  iStock | Kid brushing teeth, Boy brushing teeth, Toothbrush

ಉಗುರು ಮತ್ತು ಕೂದಲು ಕತ್ತರಿಸಿ ಸ್ವಚ್ಛವಾಗಿಡಿ:
ಉಗುರುಗಳನ್ನು ಹಾಗೂ ಕೂದಲನ್ನು ನಿಯಮಿತವಾಗಿ ಕತ್ತರಿಸಿ. ಜೊತೆಗೆ ನಿಮ್ಮ ಕೂದಲಿಗೆ ಸೂಕ್ತವಾದ ಶಾಂಪೂ ಬಳಸಿ ತೊಳೆಯುವುದು ಅತಿ ಅವಶ್ಯಕ.

This Is How Often You Should Cut Your Nails

ಟೀನೇಜ್‌ನಲ್ಲಿ ರೂಪುಗೊಳ್ಳುವ ಉತ್ತಮ ದೈಹಿಕ ಹೈಜೀನ್‌ ಅಭ್ಯಾಸಗಳು ವ್ಯಕ್ತಿತ್ವದ ಅಡಿಪಾಯವಾಗುತ್ತವೆ. ಇದು ಅವರ ಮಾನಸಿಕ ಶಾಂತಿ, ಆತ್ಮವಿಶ್ವಾಸ, ಮತ್ತು ಆರೋಗ್ಯಕರ ಜೀವನದ ಹಾದಿಗೆ ಬೆಂಬಲವಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!