ವೆಜ್ ಸೀಖ್ ಕಬಾಬ್ ಒಂದು ಸಂಜೆ ಕಾಫಿ ಜೊತೆ ಅಥವಾ ಸ್ಟಾರ್ಟರ್ ಆಗಿ ಸವಿಯಬಹುದಾದ ತಿಂಡಿಯಾಗಿದೆ. ಇದು ವಿವಿಧ ತರಕಾರಿಗಳು, ಮಸಾಲಾ ಪುಡಿ ಮತ್ತು bread crumbs ಮೂಲಕ ತಯಾರಾಗುವ ತಿಂಡಿಯಾಗಿದೆ.
ಬೇಕಾಗುವ ಪದಾರ್ಥಗಳು
2 ಟೀಸ್ಪೂನ್ ಎಣ್ಣೆ
½ ಟೀಸ್ಪೂನ್ ಜೀರಿಗೆ
¼ ಕಪ್ ಈರುಳ್ಳಿ , ನುಣ್ಣಗೆ ಕತ್ತರಿಸಿದ್ದು
1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಹಸಿರು ಮೆಣಸಿನಕಾಯಿ , ಸಣ್ಣಗೆ ಕತ್ತರಿಸಿದ್ದು
2 ಚಮಚ ಕಡಲೆ ಹಿಟ್ಟು
1 ಕಪ್ ಎಲೆಕೋಸು , ತೆಳುವಾಗಿ ಕತ್ತರಿಸಿದ್ದು
1 ಕ್ಯಾರೆಟ್ , ತುರಿದ
½ ಕಪ್ ಬಟಾಣಿ
½ ಕಪ್ ಬೀನ್ಸ್ , ಸಣ್ಣಗೆ ಹೆಚ್ಚಿದ
ಒಂದು ಮುಷ್ಟಿ ಕೊತ್ತಂಬರಿ ಸೊಪ್ಪು
ಕೆಲವು ಪುದೀನ ಎಲೆಗಳು
3 ಚಮಚ ಗೋಡಂಬಿ , ಕತ್ತರಿಸಿದ್ದು
2 ಮಧ್ಯಮ ಗಾತ್ರದ ಆಲೂಗಡ್ಡೆ
1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
½ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಕೊತ್ತಂಬರಿ ಪುಡಿ
¼ ಟೀಸ್ಪೂನ್ ಜೀರಿಗೆ ಪುಡಿ
½ ಟೀಸ್ಪೂನ್ ಗರಂ ಮಸಾಲ ಪುಡಿ
ರುಚಿಗೆ ಉಪ್ಪು
¼ ಟೀಸ್ಪೂನ್ ಮೆಣಸು
1 ಚಮಚ ನಿಂಬೆ ರಸ
¼ ಕಪ್ ಬ್ರೆಡ್ crumbs
ಹುರಿಯಲು 3 ಚಮಚ ಎಣ್ಣೆ
ಒಂದು ಚಿಟಿಕೆ ಚಾಟ್ ಮಸಾಲ
ಮಾಡುವ ವಿಧಾನ
ಮೊದಲು, ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ ಹುರಿಯಿರಿ. ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಬಾಡಿಸಿ.
ಅದಕ್ಕೆ ಕಡಲೆ ಹಿಟ್ಟು ಸೇರಿಸಿ ಕೆಲವು ಕ್ಷಣ ಹುರಿದ ನಂತರ, ಬೇಯಿಸಿದ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ತಂಪಾದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಪುದೀನ ಎಲೆಗಳು ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿದ ಗೋಡಂಬಿ ಸೇರಿಸಿ. ಆಮೇಲೆ ಬೇಯಿಸಿದ ಆಲೂಗಡ್ಡೆ, ಬೇಕಾದಷ್ಟು ಮಸಾಲೆಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ.
ಜೊತೆಗೆ ಬ್ರೆಡ್ crumbs ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು skewers ನಲ್ಲಿ ಹಾಕಿ ಉದ್ದ ಆಕಾರದಲ್ಲಿ ಒತ್ತಿ, ಬಿಸಿ ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಕಬಾಬ್‌ಗಳನ್ನು ಇಟ್ಟು ಸ್ವಲ್ಪ ಹುರಿದರೆ ವೆಜ್ ಸೀಖ್ ಕಬಾಬ್ ರೆಡಿ.