CINE | ಈ ವಾರ ಒಟಿಟಿಗೆ ಬಂದಿದೆ ಭರ್ಜರಿ ಎಂಟರ್‌ಟೈನ್‌ಮೆಂಟ್‌, ಯಾವೆಲ್ಲಾ ಸಿನಿಮಾಗಳು ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರತಿ ವಾರದಂತೆ ಈ ವಾರವೂ ಸಹ ಹಲವು ಸಿನಿಮಾಗಳು, ವೆಬ್ ಸರಣಿಗಳು, ಕೆಲ ರಿಯಾಲಿಟಿ ಶೋಗಳು ಒಟಿಟಿಗೆ ಬಂದಿವೆ. ಕನ್ನಡದ ಕೆಲ ಸಿನಿಮಾಗಳು ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಯಾವೆಲ್ಲಾ ಸಿನಿಮಾಗಳು? ಇಲ್ಲಿದೆ ಡೀಟೇಲ್ಸ್‌..

ಡಿಟೆಕ್ಟಿವ್ ಶೇರ್ದಿಲ್

ಖ್ಯಾತ ಗಾಯಕ, ನಟ ದಿಲ್ಜೀತ್ ದುಸ್ಸಾಂಜ್ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕತೆಯುಳ್ಳ ಡಿಟೆಕ್ಟಿವ್ ಶೇರ್ದಿಲ್ ಸಿನಿಮಾ ಈ ವಾರ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಶ್ರೀಮಂತ ವ್ಯಕ್ತಿಯೊಬ್ಬನ ಕೊಲೆ ಆಗುತ್ತದೆ. ಆ ಕೊಲೆಯ ತನಿಖೆಯ ಜವಾಬ್ದಾರಿ ದೀಲ್ಜೀತ್ ಹೆಗಲೇರುತ್ತದೆ. ಮುಂದಿನ ಕತೆ ಸಿನಿಮಾ ನೋಡಿ ತಿಳಿಯಬೇಕು.ಗ್ರೌಂಡ್‌ ಝೀರೋ

ಇಮ್ರಾನ್ ಹಶ್ಮಿ ನಟನೆಯ ಆರ್ಮಿ ಹಿನ್ನೆಲೆಯ ಕತೆಯನ್ನು ಹೊಂದಿರುವ ‘ಗ್ರೌಂಡ್ ಜೀರೋ’ ಸಿನಿಮಾ ಈ ವಾರ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಕುಖ್ಯಾತ ಟೆರರಿಸ್ಟ್ ಒಬ್ಬಾತನನ್ನು ಹೊಡೆದುರುಳಿಸುವ ಸೀಕ್ರೆಟ್ ಆಪರೇಷನ್ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.ಕಪಿಲ್‌ ಶರ್ಮಾ ಶೋ

ಕಪಿಲ್ ಶರ್ಮಾ ನಿರೂಪಣೆ ಮಾಡುತ್ತಿರುವ ತನ್ನದೇ ಹೆಸರಿನ ಹಾಸ್ಯ ಶೋನ ಮೂರನೇ ಸೀಸನ್ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಹಲವು ಚಾನೆಲ್​ಗಳಲ್ಲಿ ಪ್ರಸಾರವಾದ ಬಳಿಕ ಕೊನೆಯದಾಗಿ ಈಗ ನೆಟ್​ಫ್ಲಿಕ್ಸ್​ಗೆ ಈ ಶೋ ಬಂದಿದ್ದು, ಈ ಬಾರಿ ಅರ್ಚನಾ ಪೂರನ್ ಸಿಂಗ್ ಜೊತೆಗೆ ನವಜೋತ್ ಸಿಂಗ್ ಸಿಧು ಸಹ ಮರಳಿ ಬಂದಿದ್ದಾರೆ.

ಕೇರಳ ಕ್ರೈಂ ಫೈಲ್ಸ್

ಥ್ರಿಲ್ಲರ್ ಕತೆಯುಳ್ಳ ‘ಕೇರಳ ಕ್ರೈಂ ಫೈಲ್ಸ್’ ವೆಬ್ ಸರಣಿಯ ಎರಡನೇ ಸೀಸನ್ ಇದೀಗ ಬಿಡುಗಡೆ ಆಗಿದೆ. ಜಿಯೋ ಹಾಟ್​ಸ್ಟಾರ್​​ನಲ್ಲಿ ಈ ವೆಬ್ ಸರಣಿ ಬಿಡುಗಡೆ ಆಗಿದ್ದು, ಮೊದಲ ಸೀಸನ್ ಸಖತ್ ಹಿಟ್ ಆಗಿತ್ತು. ಇದರ ಜೊತೆಗೆ ‘ಪ್ರಿನ್ಸ್ ಆಂಡ್ ಫ್ಯಾಮಿಲಿ’ ಹೆಸರಿನ ಮಲಯಾಳಂ ಸಿನಿಮಾ ಜೀ5ನಲ್ಲಿ ಬಿಡುಗಡೆ ಆಗಿದೆ.

ಯುದ್ಧಕಾಂಡ

ಅಜಯ್ ರಾವ್ ನಟಿಸಿ ನಿರ್ಮಾಣವೂ ಮಾಡಿರುವ ‘ಯುದ್ಧಕಾಂಡ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೋರ್ಟ್ ಡ್ರಾಮಾ ಕತೆ ಹೊಂದಿರುವ ಈ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಈ ಹಿಂದೆ ವ್ಯಕ್ತವಾಗಿದ್ದವು. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಗಮನ ಸೆಳೆದಿದ್ದ ಈ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!