ಸಾಮಾಗ್ರಿಗಳು
50 ಗ್ರಾಂ – ಒಣ ಕೊಬ್ಬರಿ
5 ರಿಂದ 6 ಎಸಳು – ಬೆಳ್ಳುಳ್ಳಿ
ಅರ್ಧ ಟೀಸ್ಪೂನ್ – ಜೀರಿಗೆ
1 ಟೀಸ್ಪೂನ್ – ಎಣ್ಣೆ
1 ಟೀಸ್ಪೂನ್ – ಅಚ್ಚ ಖಾರದ ಪುಡಿ
ರುಚಿಗೆ ತಕ್ಕಷ್ಟು – ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಣಕೊಬ್ಬರಿಯನ್ನು ತುರಿದುಕೊಳ್ಳಿ. ಈಗ ಒಲೆ ಆನ್ ಮಾಡಿಕೊಂಡು ಅದರ ಮೇಲೆ ಕಡಾಯಿ ಇಡಬೇಕಾಗುತ್ತದೆ. ಬಿಸಿಯಾದ ನಂತರ ಅದರೊಳಗೆ ಕಡಿಮೆ ಉರಿಯಲ್ಲಿ ತುರಿದ ಒಣಕೊಬ್ಬರಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ.
ಫ್ರೈ ಮಾಡಿರುವ ಕೊಬ್ಬರಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಇದರೊಳಗೆ ಬೆಳ್ಳುಳ್ಳಿ ಎಸಳು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಚ್ಚ ಖಾರದ ಪುಡಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕಾಗುತ್ತದೆ.
ಚೆನ್ನಾಗಿ ರುಬ್ಬಿದ ನಂತರ ಮಿಶ್ರಣವನ್ನು ಒಂದು ಬೌಲ್ನಲ್ಲಿ ಹಾಕಿಕೊಳ್ಳಬೇಕು. ಈಗ ಒಗ್ಗರಣೆ ರೆಡಿ ಮಾಡಬೇಕಾಗುತ್ತದೆ. ಮೊದಲಿಗೆ ಚಿಕ್ಕ ಪಾತ್ರೆ ಇಟ್ಟು ಅದನ್ನು ಬಿಸಿ ಮಾಡಬೇಕಾಗುತ್ತದೆ. ಎರಡು ಟೀಸ್ಪೂನ್ ಎಣ್ಣೆ ಹಾಕಬೇಕಾಗುತ್ತದೆ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ ಹುರಿಯಿರಿ, ಬಳಿಕ ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಬೇಯಿಸಿ,
ನಂತರ ಕರಿಬೇವು ಹಾಕಿ ಫ್ರೈ ಮಾಡಿ. ಇದೀಗ ಸಿದ್ಧವಾದ ಒಗ್ಗರಣೆಯೊಳಗೆ ಬೆಳ್ಳುಳ್ಳಿ ತೆಂಗಿನಕಾಯಿ ಚಟ್ನಿಯ ಮಿಶ್ರಣವನ್ನು ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಬೆಳ್ಳುಳ್ಳಿ ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧವಾಗಿದೆ.