ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಗೆ ಬಗೆ ಮಾವನ್ನ ಕೇಳೋರಿಲ್ಲ. ಬೆಳೆದ ರೈತರಿಗೆ ಬೆಲೆಯೂ ಸಿಗುತ್ತಿಲ್ಲ. ಮಾವು ಬೆಳೆದವರ ಗೋಳು ಹೇಳ ತೀರದಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಕರ್ನಾಟಕದ ಮಾವು ಬೆಳಗಾರರ ನೆರವಿಗೆ ಮುಂದಾಗಿದ್ದು, 2.5 ಲಕ್ಷ ಟನ್ ಮಾವು ಖರೀದಿಗೆ ಒಪ್ಪಿಗೆ ಸೂಚಿಸಿದೆ.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಅವರ ವಿಡಿಯೋ ಸಂವಾದದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಒಟ್ಟು 2.5 ಲಕ್ಷ ಟನ್ ಮಾವು ಖರೀದಿಗೆ ಕೇಂದ್ರ ಒಪ್ಪಿಗೆ ಸೂಚಿಸಿದ್ದು, ಅಧಿಕೃತ ಆದೇಶ ಬಾಕಿ ಇದೆ. ಈ ಮಹತ್ವ ನಿರ್ಧಾರಕ್ಕೆ ಸಚಿವ ಚಲುವರಾಯ ಸ್ವಾಮಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಉತ್ಪಾದನೆಯಾದ ಅಂದಾಜು 10 ಲಕ್ಷ ಮೆಟ್ರಿಕ್ ಟನ್ಗಳಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಗಳವರೆಗೆ ಪರಿಹಾರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.