FOOD | ಶಾಲೆಯಿಂದ ಬರೋವಾಗ ಮಕ್ಕಳಿಗೆ ಈ ಯಮ್ಮಿ ಪನೀರ್ ರೋಲ್ ಮಾಡಿ ಕೊಡಿ!

ಸಂಜೆ ಸ್ನ್ಯಾಕ್‌ಗಾಗಿ ತುಂಬಾ ಸುಲಭವಾಗಿ ತಯಾರಿಸಬಹುದಾದ ಒಂದು ರುಚಿಕರ ಹಾಗೂ ಪೋಷಕಾಂಶ ತುಂಬಿದ ಡಿಶ್ ಈ ಪನೀರ್ ರೋಲ್. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಪನೀರ್ ರೋಲ್, ಪಾರ್ಟಿ ಅಥವಾ ಲಂಚ್ ಬಾಕ್ಸ್‌ಗೂ ಸರಿಯಾದ ಆಯ್ಕೆ.

ಬೇಕಾಗುವ ಪದಾರ್ಥಗಳು:

ಚಪಾತಿಗೆ
3/4 ಕಪ್ + 1/4 ಕಪ್ ಗೋಧಿ ಹಿಟ್ಟು
2 ಟೀ ಚಮಚ ಎಣ್ಣೆ
ಹಾಲು
ಉಪ್ಪು

ರೋಲ್ ಫಿಲ್ಲಿಂಗ್‌ಗೆ

1 ಕಪ್ ಪುಡಿಮಾಡಿದ ಅಥವಾ ತುರಿದ ಪನ್ನೀರ್
2 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಎಲೆಗಳು
1 ಮಧ್ಯಮ ಈರುಳ್ಳಿ, ನುಣ್ಣಗೆ ಕತ್ತರಿಸಿದ್ದು
1 ಹಸಿರು ಮೆಣಸಿನಕಾಯಿ, ನುಣ್ಣಗೆ ಕತ್ತರಿಸಿದ್ದು
1/2 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1/2 ಟೀಸ್ಪೂನ್ ಜೀರಿಗೆ
1/4 ಟೀಚಮಚ ಗರಂ ಮಸಾಲಾ ಪೌಡರ್
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1 ಟೀಸ್ಪೂನ್ ಕೊತ್ತಂಬರಿ ಪುಡಿ
2 ಟೀಸ್ಪೂನ್ ಟೊಮೆಟೊ ಕೆಚಪ್
ಉಪ್ಪು
1 ಟೀಸ್ಪೂನ್ ಎಣ್ಣೆ

ರೋಲ್‌ಗೆ ಬೇಕಾಗುವ ಪದಾರ್ಥಗಳು:
2 ಚೀಸ್ ಕ್ಯೂಬ್‌ಗಳು, ತುರಿದ (ಐಚ್ಛಿಕ)
1 ಕಪ್ ಕತ್ತರಿಸಿದ ಲೆಟಿಸ್
4 ಟೀ ಚಮಚ ಹಸಿರು ಚಟ್ನಿ
ಹುರಿಯಲು ಎಣ್ಣೆ

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ 3/4 ಕಪ್ ಗೋಧಿ ಹಿಟ್ಟು, 2 ಚಮಚ ಎಣ್ಣೆ ಮತ್ತು ಉಪ್ಪು ತೆಗೆದುಕೊಂಡು ಅಗತ್ಯವಿರುವಷ್ಟು ಹಾಲು ಸೇರಿಸಿ ಚಪಾತಿ ಹಿಟ್ಟಿನಂತೆಯೇ ನಯವಾದ ಹಿಟ್ಟನ್ನು ಕಲಸಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಚಪಾತಿಗಳನ್ನು ತಯಾರಿಸಿ ಅದನ್ನು ಬೇಯಿಸಿ.

ಫಿಲ್ಲಿಂಗ್ ಮಾಡುವ ವಿಧಾನ:

ಒಂದು ಸಣ್ಣ ಪ್ಯಾನ್‌ನಲ್ಲಿ 1 ಟೀಚಮಚ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಜೀರಿಗೆ ಸೇರಿಸಿ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 30 ಸೆಕೆಂಡುಗಳ ಕಾಲ ಹುರಿಯಿರಿ. ಈಗ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ಟೊಮೆಟೊ ಕೆಚ್ ಅಪ್, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ, ಪುಡಿಮಾಡಿದ ಪನೀರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಬೇಯಿಸಿದ ಚಪಾತಿಗೆ ಈ ಫಿಲ್ಲಿಂಗ್ ಹಾಕಿ ಅದರ ಮೇಲೆ ತುರಿದ ಚೀಸ್,ಲೆಟಿಸ್, ಹಾಗೂ ಹಸಿರು ಚಟ್ನಿಯನ್ನು ಸಮವಾಗಿ ಹರಡಿ ರೋಲ್ ಮಾಡಿದರೆ ಪನೀರ್ ರೋಲ್ ರೆಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!