UPI Payment | ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇಲ್ಲದಿದ್ದರೂ UPI ಪೇಮೆಂಟ್ ಮಾಡೋದು ಹೇಗೆ?

2016ರಲ್ಲಿ ರಾಷ್ಟ್ರೀಯ ಪಾವತಿ ನಿಗಮ (NPCI) ಆರಂಭಿಸಿದ ಏಕೀಕೃತ ಪಾವತಿ ಇಂಟರ್ಫೇಸ್ (UPI), ಇಂದು ಲಕ್ಷಾಂತರ ಭಾರತೀಯರಿಗೆ ತಮ್ಮ ಬ್ಯಾಂಕ್ ಖಾತೆಗಳಿಂದ ತಕ್ಷಣ ಹಣ ವರ್ಗಾಯಿಸಲು ಅನುಕೂಲವಾಗಿದೆ. ಆದರೆ ಇಂಟರ್ನೆಟ್ ಸಂಪರ್ಕ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಅಥವಾ ಸೇವೆ ಅಸ್ಥಿರವಾಗಿರುವ ಸಂದರ್ಭಗಳಲ್ಲಿ, ಈ ಡಿಜಿಟಲ್ ಪಾವತಿ ವಿಧಾನ ಅಸಾಧ್ಯವಾಗುತ್ತಿತ್ತು. ಆ ಅಡಚಣೆಗೆ ಶಾಶ್ವತ ಪರಿಹಾರ ಕಂಡುಬಂದಿದ್ದು, *99# USSD ಆಧಾರಿತ ಸೇವೆಯ ಮೂಲಕ ಆಫ್‌ಲೈನ್ UPI ವಹಿವಾಟು ಸಾಧ್ಯವಾಗಿದೆ.

ಪ್ರಮುಖ ಹಂತಗಳು:

ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99# ಅನ್ನು ಡಯಲ್ ಮಾಡಿದರೆ, NPCI ರೂಪಿಸಿದ USSD ಆಧಾರಿತ ಸೇವೆ ಪ್ರಾರಂಭವಾಗುತ್ತದೆ. ಈ ಸೇವೆಯ ಮೂಲಕ ಹಣ ಕಳುಹಿಸುವುದು, ಬ್ಯಾಲೆನ್ಸ್ ನೋಡುವುದು ಹಾಗೂ UPI ನಿರ್ವಹಣೆ ಸಾಧ್ಯ.

ಸೇವೆ ಪ್ರಾರಂಭವಾದ ನಂತರ, ಬಳಕೆದಾರರಿಗೆ ಹಿಂದಿ, ಇಂಗ್ಲಿಷ್ ಸೇರಿ ಒಟ್ಟು 13 ಭಾಷೆಗಳ ಪೈಕಿ ಒಂದನ್ನು ಆಯ್ಕೆ ಮಾಡುವ ಅವಕಾಶ ಲಭ್ಯವಿರುತ್ತದೆ.

ಬಳಕೆದಾರರು ತಮ್ಮ ಬ್ಯಾಂಕ್ ವಿವರಗಳ ಪರಿಶೀಲನೆಗಾಗಿ IFSC ಕೋಡ್ ಅನ್ನು ಅಥವಾ ಲಭ್ಯವಿರುವ ಪಟ್ಟಿ ಮೂಲಕ ಬ್ಯಾಂಕ್ ಆಯ್ಕೆ ಮಾಡಬೇಕು.

ನೋಂದಾಯಿತ ಫೋನ್ ಸಂಖ್ಯೆಗೆ ಲಿಂಕ್ ಆಗಿರುವ ಎಲ್ಲ ಬ್ಯಾಂಕ್ ಖಾತೆಗಳ ಪಟ್ಟಿ ತೋರಿಸಲಾಗುತ್ತದೆ. ಉಪಯೋಗಿಸುವ ಖಾತೆ ಆಯ್ಕೆ ಮಾಡಲು ಸೂಚನೆಯಂತೆ 1 ಅಥವಾ 2 ಇನ್‌ಪುಟ್ ಮಾಡಬಹುದು.

ಖಾತೆ ದೃಢೀಕರಣಕ್ಕಾಗಿ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕೆಗಳು ಮತ್ತು ಅವಧಿ ಮುಕ್ತಾಯ ದಿನಾಂಕವನ್ನು ನಮೂದಿಸಬೇಕಾಗುತ್ತದೆ.

ಪಾವತಿ ಅಥವಾ ವಹಿವಾಟು ನಿರ್ವಹಣೆಗಾಗಿ UPI ಪಿನ್ ನಮೂದಿಸಬೇಕು. ಇದೇ ಕ್ರಮನಲ್ಲಿ ಆಫ್‌ಲೈನ್ UPI ಸೇವೆಯನ್ನು ಸಕ್ರಿಯ ಅಥವಾ ನಿಷ್ಕ್ರಿಯ ಮಾಡಬಹುದು.

ಯಾವುದೇ ಅಡಚಣೆ ಇಲ್ಲದೇ ಆಫ್‌ಲೈನ್‌ನಲ್ಲಿ ಪಾವತಿಸಲು ಈ ಸೇವೆ ಗ್ರಾಮೀಣ ಹಾಗೂ ಇಂಟರ್ನೆಟ್‌ ಕಡಿಮೆಯಿರುವ ಪ್ರದೇಶಗಳಲ್ಲಿರುವ ಬಳಕೆದಾರರಿಗೆ ವರದಾನವಾಗಿದೆ. ಇದೀಗ UPI ಪಾವತಿಯು ಇಂಟರ್ನೆಟ್‌ಗೆ ಅವಲಂಬಿತವಾಗಿರದೆ, ಎಲ್ಲೆಂದರಲ್ಲಿ ಲಭ್ಯವಾಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!