ಮುರುಡೇಶ್ವರ ದೇವಸ್ಥಾನದಲ್ಲಿ ಹೊಸ ರೂಲ್ಸ್! ದರ್ಶನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ಪಾಲಿಸುವಂತೆ ಮನವಿ

ಹೊಸದಿಗಂತ ವರದಿ ಭಟ್ಕಳ :

ಇತಿಹಾಸ ಪ್ರಸಿದ್ಧ ಶ್ರೀ ಮುರುಡೇಶ್ವರ ದೇವಸ್ಥಾನದ ದರ್ಶನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕೆಂದು ದೇವಸ್ಥಾನದ ವತಿಯಿಂದ ವಿನಂತಿಸಲಾಗಿದೆ.

ಈ ಕುರಿತು ದೇವಸ್ಥಾನದ ಎದುರು ವಸ್ತ್ರಸಂಹಿತೆ ಬಗ್ಗೆ ಕಟೌಟ್ ಹಾಕಿ ಜಾಗೃತಿ ಮೂಡಿಸಲಾಗಿದೆ. ದೇವಸ್ಥಾನದವರು ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ವಸ್ತ್ರಸಂಹಿತೆ ಪಾಲಿಸುವಂತೆ ವಿನಂತಿಸಿ ಭಾನುವಾರ ಕಟೌಟ್ ಹಾಕಿದ್ದಾರೆ. ಈ ಕಟೌಟ್ ನಲ್ಲಿ ಮಹಿಳೆಯರು ಸೀರೆ, ಚೂಡಿದಾರ, ಪುರುಷರು, ಅಂಗಿ ಧೋತಿ, ಪ್ಯಾಂಟ್ ಶರ್ಟ ಮತ್ತು ಕುರ್ತಾ ಫೈಜಾಮ್ ಧರಿಸಿ ದೇವರ ದರ್ಶನ ಪಡೆಯಬಹುದೆಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!