ಓಟ್ಸ್ ತನ್ನ ಆಹಾರದ ನಾರು, ಕಬ್ಬಿಣ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶಗಳಿಂದಾಗಿ ಅದರ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಈ ದಕ್ಷಿಣ ಭಾರತೀಯ ಶೈಲಿಯ ಈ ಉಪ್ಮಾ ಮಕ್ಕಳಿಗೆ ಹೃದಯ ಸಂಬಂದಿತ ಖಾಯಿಲೆ ಉಳ್ಳವರಿಗೆ ಮತ್ತು ಮಧುಮೇಹ ರೋಗಿಗಳಿಗೆ ಬಡಿಸಲು ಸೂಕ್ತವಾದ ಆರೋಗ್ಯಕರ ಉಪಹಾರವಾಗಿದೆ.
ಬೇಕಾಗುವ ಪದಾರ್ಥಗಳು:
1 ಕಪ್ ರೋಲ್ಡ್ ಓಟ್ಸ್
1/2 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಜೀರಿಗೆ
1 ಟೀ ಚಮಚ ಕಡ್ಲೆ ಬೇಳೆ
2 ಕರಿಬೇವು ಎಲೆಗಳು
1 ಮಧ್ಯಮ ಈರುಳ್ಳಿ, ನುಣ್ಣಗೆ ಕತ್ತರಿಸಿದ್ದು
1 ಹಸಿರು ಮೆಣಸಿನಕಾಯಿ, ಕತ್ತರಿಸಿದ್ದು
1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್
1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ
1 ಟೊಮೆಟೊ, ಸಣ್ಣಗೆ ಕತ್ತರಿಸಿದ್ದು
5-6 ಹುರಿದ ಗೋಡಂಬಿ
2 ಚಮಚ ಕತ್ತರಿಸಿದ ಕೊತ್ತಂಬರಿ ಎಲೆಗಳು
ರುಚಿಗೆ ತಕ್ಕಷ್ಟು ಉಪ್ಪು
2 ಚಮಚ ಅಡುಗೆ ಎಣ್ಣೆ ಅಥವಾ ತುಪ್ಪ
1¼ ಕಪ್ ಬಿಸಿ ನೀರು
ಮಾಡುವ ವಿಧಾನ
ಮೊದಲಿಗೆ ಓಟ್ಸ್ ಅನ್ನು ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ ಪಕ್ಕಕ್ಕೆ ಇರಿಸಿ. ಅದೇ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ, ಕಡಲೆ ಬೇಳೆ ಮತ್ತು ಕರಿಬೇವು, ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ, ಹುರಿಯಿರಿ.
ಜೊತೆಗೆ ಕತ್ತರಿಸಿದ ಕ್ಯಾರೆಟ್, ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಕತ್ತರಿಸಿದ ಟೊಮ್ಯಾಟೊ ಹಾಗೂ ಉಪ್ಪು ಹಾಕಿ 2-3 ನಿಮಿಷ ಬೇಯಿಸಿ.ಈಗ ಈ ಮಿಶ್ರಣಕ್ಕೆ ಹುರಿದ ಓಟ್ಸ್ ಸೇರಿಸಿ ಮಿಶ್ರಣ ಮಾಡಿ ಒಂದು ನಿಮಿಷ ಬೇಯಿಸಿ,1¼ ಕಪ್ ಬಿಸಿ ನೀರು ಹಾಕಿ ಮುಚ್ಚಳದಿಂದ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಓಟ್ಸ್ ಉಪ್ಮಾ ರೆಡಿ.