Heart Attack | ಹೃದಯಾಘಾತಕ್ಕೂ ಹೊಟ್ಟೆನೋವಿಗೂ ಇದ್ಯಾ ಸಂಬಂಧ? ಹೊಟ್ಟೆ ನೋವು ಬಂದ್ರೂ Heart Attack ಆಗುತ್ತಾ?

ಸಾಮಾನ್ಯವಾಗಿ ಹೃದಯಾಘಾತದ (Heart Attack) ಲಕ್ಷಣಗಳನ್ನು ಎದೆ ನೋವು, ಉಸಿರಾಟದ ತೊಂದರೆ (Breathing Difficulty), ಬೆನ್ನು ನೋವು ಇತ್ಯಾದಿಯಾಗಿ ನಾವು ಕಲ್ಪಿಸುತ್ತೇವೆ. ಆದರೆ ಇತ್ತೀಚಿನ ವೈದ್ಯಕೀಯ ಅಧ್ಯಯನಗಳು ಮತ್ತು ತಜ್ಞರ ವರದಿಗಳ ಪ್ರಕಾರ, ಕೆಲವೊಮ್ಮೆ ಹೃದಯಾಘಾತಕ್ಕೂ ಮೊದಲು ಹೊಟ್ಟೆ ನೋವು, ಅಜೀರ್ಣ, ಬೆಲ್ಚಿಂಗ್ (ತೇಗು) ಮುಂತಾದ ಅಸ್ವಾಭಾವಿಕ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಬಹುದು. ಇದನ್ನು ಜನ ಸಾಮಾನ್ಯ ಗ್ಯಾಸ್ಟ್ರಿಕ್ ಎಂದು ನಂಬಿದರೂ, ಅದು ಹಲವೊಮ್ಮೆ ಹೃದಯದ ಎಚ್ಚರಿಕೆಯ ಸಂಕೇತವಾಗಿರಬಹುದು ಎಂಬುದು ಭಯಾನಕ ಸಂಗತಿ.

ಹೃದಯ ಮತ್ತು ಹೊಟ್ಟೆ ನಡುವಿನ ಸಂಪರ್ಕವೇನು?
ನಮ್ಮ ದೇಹದ ಅಪಧಮನಿಗಳಲ್ಲಿ ತೊಂದರೆ ಉಂಟಾದಾಗ, ಹೃದಯಕ್ಕೆ ಸರಿಯಾದ ಆಮ್ಲಜನಕಯುಕ್ತ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಿ ನೋವು ಉಂಟಾಗಬಹುದು. ಕೆಲವೊಮ್ಮೆ ಈ ನೋವು ಅಜೀರ್ಣ ಅಥವಾ ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಊಹಿಸಲಾಗುತ್ತದೆ.

ಕೆಲವು ಮುನ್ಸೂಚನೆಗಳು ಹೀಗೂ ಬರಬಹುದು:

ತೀವ್ರ ಅಜೀರ್ಣ, ನಿರಂತರ ತೇಗು (Belching)

ವಾಕರಿಕೆ, ವಾಂತಿ ಅಥವಾ ಅತಿಸಾರ

ತಲೆತಿರುಗುವುದು, ದೌರ್ಬಲ್ಯ

ಶೀತ ವಾತಾವರಣದಲ್ಲಿಯೂ ಬೆವರು ಬೀಳುವುದು

ಹೊಟ್ಟೆ ನೋವಿನೊಂದಿಗೆ ಎದೆ ಅಥವಾ ಬಾಯಿಯಲ್ಲಿ ನೋವು

ಮಹಿಳೆಯರಲ್ಲಿ ವಿಶೇಷ ಎಚ್ಚರಿಕೆ ಅಗತ್ಯ!
ಕೆಲವು ವರದಿಗಳ ಪ್ರಕಾರ, ಪುರುಷರಿಗಿಂತ ಮಹಿಳೆಯರಿಗೆ ಹೃದಯಾಘಾತಕ್ಕೂ ಮುನ್ನ ಅಜೀರ್ಣ ಮತ್ತು ಬೆಲ್ಚಿಂಗ್ ಬರುವ ಸಾಧ್ಯತೆ ಹೆಚ್ಚು.

ಈ ಎಲ್ಲ ಲಕ್ಷಣಗಳನ್ನು ಹಗುರವಾಗಿ ನಿರ್ಲಕ್ಷಿಸದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. “ಗ್ಯಾಸ್ಟ್ರಿಕ್” ಎಂದು ತಪ್ಪಾಗಿ ಊಹಿಸಿ ಮನೆ ಮದ್ದಿನ ಚಿಕಿತ್ಸೆ ಅವಲಂಬಿಸುವ ಬದಲು, ನಿಖರ ತಪಾಸಣೆಗೊಳಪಡಿಸಿಕೊಳ್ಳುವುದು ಉತ್ತಮ. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!