ಕರುಳಿನ ಆರೋಗ್ಯವು ನಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ನೇರವಾಗಿ ಸಂಬಂಧಪಟ್ಟಿದೆ. ಇಮ್ಮ್ಯೂನ್ ಸಿಸ್ಟಮ್, ಮೆದುಳಿನ ಚಟುವಟಿಕೆ, ಚರ್ಮದ ಸ್ಥಿತಿ, ನಿದ್ರೆ ಗುಣಮಟ್ಟ ಎಲ್ಲವು ಕರುಳಿನ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚಿನ ವೈದ್ಯಕೀಯ ಅಧ್ಯಯನಗಳು, ಕರುಳನ್ನು “ಮೊದಲ ಮೆದುಳು” ಎನ್ನುವಷ್ಟರ ಮಟ್ಟಿಗೆ ಮಹತ್ವ ನೀಡಿವೆ. ಆದ್ದರಿಂದ, ಕರುಳಿನ ಸ್ಥಿತಿಯ ಬಗ್ಗೆ ಎಚ್ಚರಿಕೆ ಸೂಚಿಸುವ ಕೆಲವು ಮುಖ್ಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ಅಗತ್ಯ.
ಆಗಾಗ ಅನಾರೋಗ್ಯ ಮತ್ತು ಕಡಿಮೆಯಾದ ರೋಗನಿರೋಧಕ ಶಕ್ತಿ:
ಪದೇ ಪದೇ ಶೀತ, ಜ್ವರ, ಅಲರ್ಜಿ ಆಗುತ್ತಿರುವುದೇ? ಇದು ನಿಮ್ಮ ರೋಗನಿರೋಧಕ ಶಕ್ತಿಯ ಕುಂದುವ ಸೂಚನೆ. ಇದು ಕರುಳಿನ ಬ್ಯಾಕ್ಟೀರಿಯ ಅಸಮತೋಲನದಿಂದ ಉಂಟಾಗಬಹುದು.
ಚರ್ಮದ ಸಮಸ್ಯೆಗಳು:
ಮೊಡವೆ, ಎಸ್ಜಿಮಾ, ರೊಸಾಸಿಯಾ ಮುಂತಾದವುಗಳು ಕರುಳಿನ ಒಳಗಿನ ಉರಿಯೂತದಿಂದ ಉಂಟಾಗಬಹುದು. ಲೀಕಿ ಗಟ್ ಸಿಂಡ್ರೋಮ್ ಕೂಡ ಇದರ ಕಾರಣವಾಗಿರಬಹುದು.
ಜಂಕ್ ಫುಡ್ ತಿನ್ನೋ ಆಸೆ:
ಸಕ್ಕರೆ ಅಥವಾ ತೈಲಯುಕ್ತ ಆಹಾರದ ಹಂಬಲವು ದೇಹದ ಕೆಟ್ಟ ಬ್ಯಾಕ್ಟೀರಿಯಾ ಹೆಚ್ಚಿದ ಸೂಚನೆಯಾಗಿರಬಹುದು.ಇದು ತೂಕ ಹೆಚ್ಚಳ, ಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೆದುಳಿಗೆ ಆಯಾಸ ಮತ್ತು ಮರೆವಿನ ಅನುಭವ:
ಕರುಳು ಪೋಷಕಾಂಶ ಹೀರಿಕೊಳ್ಳದಿದ್ದರೆ, ದೇಹಕ್ಕೆ ಇಂಧನ ಕಡಿಮೆಯಾಗುತ್ತದೆ. ಈ ಕಾರಣದಿಂದ ಬ್ರೆನ್ ಫಾಗ್, ನಿದ್ರೆ ಕೊರತೆ ಉಂಟಾಗಬಹುದು.
ಹೊಟ್ಟೆ ಉಬ್ಬರ, ಅಜೀರ್ಣ:
ನಿರಂತರ ಗ್ಯಾಸು, ಅಜೀರ್ಣ, ಅತಿಸಾರ ಕರುಳಿನ ತೊಂದರೆಯ ಪ್ರಮುಖ ಸೂಚನೆಗಳು. all these point to a disturbed gut.
ಈ ಲಕ್ಷಣಗಳಿರುವವರು ತಕ್ಷಣ ಆರೋಗ್ಯಕರ ಆಹಾರ, ನಿದ್ರೆ, ವ್ಯಾಯಾಮದ ಶಿಸ್ತನ್ನು ರೂಪಿಸಬೇಕು. ಕರುಳನ್ನು ಕಾಪಾಡಿದರೆ, ಸಂಪೂರ್ಣ ಆರೋಗ್ಯ ನಿಮ್ಮನ್ನು ಅನುಸರಿಸುತ್ತದೆ. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)