ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಬೀಟ್ರೂಟ್ ಕೂಡ ಮುಂಚೂಣಿಯಲ್ಲಿದೆ. ವಿಟಮಿನ್‌ಗಳು, ಅಂಟಿಆಕ್ಸಿಡೆಂಟ್ಸ್‌ಗಳಿಂದ ಸಮೃದ್ಧವಾದ ಬೀಟ್ರೂಟ್ ನ ಕೇವಲ ಆರೋಗ್ಯಕ್ಕಲ್ಲ, ಚರ್ಮಕ್ಕೂ ಅಪಾರ ಲಾಭವಿದೆ ಎಂಬುದು ಬಹುತೇಕವರಿಗೆ ಗೊತ್ತಿಲ್ಲ. ಬೀಟ್ರೂಟ್ ಚರ್ಮವನ್ನು ಹೈಡ್ರೇಟ್ ಮಾಡಿ ಹೊಳೆಯುವಂತೆ ಮಾಡುತ್ತದೆ. ನೈಸರ್ಗಿಕ ಗುಣಗಳಿಂದ ಕೂಡಿದ ಈ ಗೆಡ್ಡೆ ತರಕಾರಿಯನ್ನು ಚರ್ಮದ ಆರೈಕೆಗೆ ಸೇರಿಸಿಕೊಳ್ಳುವುದರಿಂದ ನಿರ್ಜಲಿತವಾದ ಚರ್ಮವೂ ಹೊಸತನ ಪಡೆಯಬಹುದು.
ಬೀಟ್ರೂಟ್-ಮೊಸರು ಫೇಸ್ ಪ್ಯಾಕ್:
ಬೀಟ್ರೂಟ್ ರಸ, ಮೊಸರು ಮತ್ತು ಮುಲ್ತಾನಿ ಮಿಟ್ಟಿಯನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿ 15-20 ನಿಮಿಷ ಬಿಡಿ. ಇದು ಚರ್ಮವನ್ನು ತಂಪು ಮಾಡಿ, ಚರ್ಮಕ್ಕೆ ತಾಜಾತನ ನೀಡುತ್ತದೆ.
ಬೀಟ್ರೂಟ್-ಅಲೋವೆರಾ ಪ್ಯಾಕ್:
ಬೀಟ್ರೂಟ್ ರಸಕ್ಕೆ ಒಂದು ಚಮಚ ಅಲೋವೆರಾ ಜೆಲ್ ಸೇರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದು ಚರ್ಮದ ಆಳದಲ್ಲಿರುವ ಮಲಿನತೆ ತೆಗೆದುಹಾಕುತ್ತದೆ ಹಾಗೂ ತಂಪು ನೀಡುತ್ತದೆ.
ಬೀಟ್ರೂಟ್-ನಿಂಬೆ ಪ್ಯಾಕ್:
ಕಲೆಗಳು ಅಥವಾ ಕಪ್ಪುಚುಕ್ಕೆ ಇರುವವರಿಗೆ ಬೀಟ್ರೂಟ್ ಹಾಗೂ ನಿಂಬೆ ರಸ ಮಿಶ್ರಣ ಶ್ರೇಷ್ಠ ಪರಿಹಾರ. ವಾರಕ್ಕೆ ಎರಡು ಬಾರಿ ಬಳಸಿ, ಮುಖದ ಹೊಳಪು ಪುನಃ ಪಡೆಯಬಹುದು.
ಗಮನಿಸಿ: ಯಾವುದೇ ಫೇಸ್ ಪ್ಯಾಕ್ ಬಳಸುವ ಮೊದಲು ಸಣ್ಣ ಭಾಗದಲ್ಲಿ ಪರೀಕ್ಷಿಸಿ ನಂತರ ಉಪಯೋಗಿಸಿ. ಇಲ್ಲವಾದರೆ ಅಲರ್ಜಿ ಉಂಟಾಗಬಹುದು.