ಬೇಬಿಕಾರ್ನ್ ಮತ್ತು ಚೀಸ್ನ ಕಾಂಬಿನೇಷನ್ ಎಂದರೆ ಯಾವುದೇ ಆಹಾರ ಪ್ರಿಯರಿಗೆ ತೀರದ ಖುಷಿ! ಈ ಸ್ಪೈಸಿ ಮತ್ತು ಚೀಸ್ನ ನಿಂದ ಕೂಡಿದ ಬೇಬಿಕಾರ್ನ್ ಫ್ರೈಸ್ ನಿಮ್ಮ ತಿನಿಸು ಸಮಯವನ್ನು ವಿಶೇಷಗೊಳಿಸಲಿದೆ. ವಿಶೇಷವಾಗಿ ಮಳೆಗಾಲದ ಇವಿನಿಂಗ್ಗಳಲ್ಲಿ ಟೀ ಜೊತೆ ತಿನ್ನಲು ಇದು ಪರ್ಫೆಕ್ಟ್ ಮ್ಯಾಚ್.
ಬೇಕಾಗುವ ಸಾಮಗ್ರಿಗಳು:
ಬೇಬಿಕಾರ್ನ್ – 10–12 (ಉದ್ದವಾಗಿ ಕತ್ತರಿಸಿಕೊಳ್ಳಿ)
ಗೋಧಿಹಿಟ್ಟು – ½ ಕಪ್
ಕಾರ್ನ್ ಫ್ಲೋರ್ – ¼ ಕಪ್
ಮೆಣಸು ಪುಡಿ – 1 ಟೀ ಸ್ಪೂನ್
ಜೀರಿಗೆ ಪುಡಿ – ½ ಟೀ ಸ್ಪೂನ್
ಮೊಸರು – 2 ಟೇಬಲ್ ಸ್ಪೂನ್
ಚೀಸ್ (ಕ್ರಷ್ ಮಾಡಿದ್ದು) – ½ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿದ್ದಷ್ಟು
bread crumbs – ಬೇಕಾದಷ್ಟು
ಎಣ್ಣೆ – ಫ್ರೈ ಮಾಡಲು
ತಯಾರಿಸುವ ವಿಧಾನ:
ಮೊದಲಿಗೆ ಬೇಬಿಕಾರ್ನ್ಗಳನ್ನು ಉದ್ದಕ್ಕೆ ತುಂಡು ಮಾಡಿ, 5 ನಿಮಿಷಗಳ ಕಾಲ ಬೇಯಿಸಿ ತಣಿಯಲು ಬಿಡಿ.
ಮತ್ತೊಂದು ಬಟ್ಟಲಿನಲ್ಲಿ ಗೋಧಿಹಿಟ್ಟು, ಕಾರ್ನ್ಫ್ಲೋರ್, ಜೀರಿಗೆ ಪುಡಿ, ಮೆಣಸು ಪುಡಿ, ಉಪ್ಪು, ಮೊಸರು, ಚೀಸ್ ಮತ್ತು ಸ್ವಲ್ಪ ನೀರು ಸೇರಿಸಿ ಬಾಟರ್ ತಯಾರಿಸಿ. ಇದರಲ್ಲಿ ಬೇಬಿಕಾರ್ನ್ಗಳನ್ನು ಡಿಪ್ ಮಾಡಿ ಬ್ರೆಡ್ ಕ್ರಮ್ಸ್ನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ. ಸರ್ವ್ ಮಾಡುವಾಗ ಇದರ ಮೇಲೆ ಹೆಚ್ಚುವರಿ ಚೀಸ್ ಹಾಕಿದರೆ ರುಚಿಯಾದ ಚೀಸ್ ಬೇಬಿಕಾರ್ನ್ ಫ್ರೈಸ್ ರೆಡಿ.