ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 9.82 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರಿನ ಇಡಿ, 3.98 ಕೋಟಿ (ಅಂದಾಜು) ಮೌಲ್ಯದ ಫ್ಲಾಟ್ಗಳು, ನಿರ್ಮಿತ ಕಟ್ಟಡ ಮತ್ತು ರೂ. 2.01 ಕೋಟಿ (ಅಂದಾಜು) ಮೌಲ್ಯದ ಭೂಮಿ ಮತ್ತು ರೂ. 1.97 ಕೋಟಿ (ಅಂದಾಜು) ಮೌಲ್ಯದ ನಗದು ಮತ್ತು ವಾಹನದ ರೂಪದಲ್ಲಿ ಚಲಿಸಬಲ್ಲ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದಿದೆ.
ಐಶ್ವರ್ಯಾ ಗೌಡ ಮತ್ತು ಇತರರ ಪ್ರಕರಣದಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿ ಹಲವಾರು ವ್ಯಕ್ತಿಗಳಿಂದ ಚಿನ್ನ, ನಗದು ಮತ್ತು ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ಕ್ರಿಮಿನಲ್ ಪಿತೂರಿಯಲ್ಲಿ ಹಣ ವರ್ಗಾವಣೆಯ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಕಂಡುಬಂದಿದೆ ಎಂದು ತಿಳಿಸಿದೆ.