ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಟದ ಕುರಿತು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮಾತನಾಡಿದ್ದಾರೆ.
2027ರ ಏಕದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವ ಕುರಿತು ಮಾತನಾಡುತ್ತಾ , ಯಾರಾದರೂ ವಿಶ್ವಕಪ್ ಏಕೆ ಆಡಬಾರದು?.ಇಲ್ಲಿ ಆಡಲು ವಯಸ್ಸು ಮಾನದಂಡವಲ್ಲ, ಪ್ರದರ್ಶನ, ಫಿಟ್ನೆಸ್ ಮಾನದಂಡಗಳು ಎಂದು ಉತ್ತರಿಸಿದರು.
ನಾನು ಯಾವಾಗಲೂ ಯಾರಿಗೂ ಏನನ್ನೂ ಹೇಳಬಾರದು ಎಂದು ಭಾವಿಸುತ್ತೇನೆ. ನಾನು 24 ವರ್ಷದವನಾಗಿದ್ದಾಗ ಯಾರೂ ನನಗೆ ಏನನ್ನೂ ಹೇಳಲಿಲ್ಲ ಮತ್ತು ಈಗ ನಾನು ಭಾರತಕ್ಕಾಗಿ 10 ವರ್ಷ, 20 ವರ್ಷ ಅಥವಾ ಇನ್ನೆಷ್ಟೇ ವರ್ಷ ವಯಸ್ಸಿನಲ್ಲಿ ಆಡುತ್ತಿರುವಾಗಲೂ, ಯಾರೊಬ್ಬರು ಬಂದು ನನ್ನ ವಯಸ್ಸಿನ ಬಗ್ಗೆ ಹೇಳುವ ಅಗತ್ಯವಿಲ್ಲ ಎಂದು ಹೇಳಿದರು.
ಹೀಗಾಗಿ ಇಲ್ಲಿ ರೋಹಿತ್ ಅಥವಾ ವಿರಾಟ್ ಅಥವಾ ಯಾರೇ ಮುಂದಿನ ವಿಶ್ವಕಪ್‌ನಲ್ಲಿ ಆಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ನಾವು ಅಲ್ಲ, ಬದಲಾಗಿ ಈ ನಿರ್ಧಾರ ಮಾಡಬೇಕಿರುವುದು ಆ ಆಟಗಾರರು. ಚೆನ್ನಾಗಿ ಆಡುವುದ್ದಿದ್ದರೆ, ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಹಂಬಲವಿದ್ದರೆ, ಏಕೆ ಆಡಬಾರದು’ ಎಂದು ಅವರು ಪ್ರಶ್ನಿಸಿದರು.
ಒಬ್ಬ ಆಟಗಾರ ಫಿಟ್ ಆಗಿ ಇದ್ದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಅಲ್ಲಿ ಆತನ ವಯಸ್ಸು ಮುಖ್ಯವಾಗಲ್ಲ. ಹಾಗೆಯೇ ಆ ವ್ಯಕ್ತಿ ಫಿಟ್ ಆಗಿಲ್ಲದಿದ್ದರೆ ನೀವು ಯಾವುದೇ ಸಮಯದಲ್ಲಿ ಅವರನ್ನು ಹೊರಹಾಕಬಹುದು. ಹಾಗಾಗಿ ಇಲ್ಲಿ ಉತ್ತಮ ಪ್ರದರ್ಶನ ಮತ್ತು ಫಿಟ್ ಆಗಿದ್ದೀರಿ, ಆಟವಾಡುತ್ತಲೇ ಇದ್ದೀರಿ ಎಂಬುದಾಗಿರುತ್ತದೆ ಎಂದು ತಿಳಿಸಿದರು.



