ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ಇರಾನ್, ಇರಾಕ್, ಇಸ್ರೇಲ್ ವಾಯುಪ್ರದೇಶ ತಪ್ಪಿಸಿ ಏರ್ ಇಂಡಿಯಾ ಹಾರಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಹೀಗಾಗಿ ಏರ್ ಇಂಡಿಯಾ ಇರಾನ್ (Iran), ಇರಾಕ್ (Iraq) ಮತ್ತು ಇಸ್ರೇಲ್‌ನ (Israel) ವಾಯುಪ್ರದೇಶಗಳನ್ನು ತಪ್ಪಿಸುವುದಾಗಿ ಘೋಷಿಸಿದೆ.

ಏರ್ ಇಂಡಿಯಾ ಹೇಳಿಕೆಯೊಂದರಲ್ಲಿ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಯುಎಇ, ಕತಾರ್, ಒಮಾನ್ ಮತ್ತು ಕುವೈತ್‌ಗೆ ತೆರಳುವ ಕೆಲವು ವಿಮಾನಗಳು ಪರ್ಯಾಯ ಮಾರ್ಗಗಳನ್ನು ಬಳಸಲಿವೆ ಎಂದು ಹೇಳಿದೆ.

‘ಪರ್ಷಿಯನ್ ಗಲ್ಫ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಇರಾನ್, ಇರಾಕ್ ಮತ್ತು ಇಸ್ರೇಲ್ ವಾಯುಪ್ರದೇಶಗಳ ಮೇಲೆ ವಿಮಾನಗಳನ್ನು ಓಡಿಸುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ, ಮುಂದಿನ ದಿನಗಳಲ್ಲಿ ಪರ್ಷಿಯನ್ ಗಲ್ಫ್‌ನ ಕೆಲವು ವಾಯುಪ್ರದೇಶಗಳನ್ನು ತಪ್ಪಿಸಿ, ಯುಎಇ, ಕತಾರ್, ಒಮಾನ್ ಮತ್ತು ಕುವೈತ್‌ಗೆ ಪರ್ಯಾಯ ಮಾರ್ಗಗಳನ್ನು ಬಳಸಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಬದಲಾವಣೆಯಿಂದಾಗಿ ವಿಮಾನಗಳ ಪ್ರಯಾಣ ಸಮಯ ಹೆಚ್ಚಾಗಬಹುದು ಎಂದು ಏರ್ ಇಂಡಿಯಾ ಹೇಳಿದ್ದು, ಭವಿಷ್ಯದಲ್ಲಿ ಅಗತ್ಯವಿದ್ದರೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. ‘ಯುರೋಪ್ ಮತ್ತು ಉತ್ತರ ಅಮೆರಿಕದ ಕೆಲವು ವಿಮಾನಗಳ ಸಮಯ ವಿಸ್ತರಿಸಬಹುದು. ನಾವು ಬಾಹ್ಯ ಭದ್ರತಾ ಸಲಹೆಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ’ ಎಂದು ಏರ್ ಇಂಡಿಯಾ ತಿಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!