ಶಿವಮೊಗ್ಗ, ಧಾರವಾಡ ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ನಿರ್ದೇಶಕ ಪ್ರದೀಪ್, ಚಿಕ್ಕಮಗಳೂರು ನಗರಸಭೆ ಅಧಿಕಾರಿ ಲತಾಮಣಿ ಮನೆ ಮೇಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ದಾಳಿ ನಡೆಸಿದ್ದಾರೆ.

ಆನೇಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್, ಗದಗದ ಪಟ್ಟಣ ಪೊಲೀಸ್ ನಿರೀಕ್ಷಕ ಧ್ರುವರಾಜ್​, ಧಾರವಾಡ ಮಲಪ್ರಭಾ ಯೋಜನೆ ಇಂಜಿನಿಯರ್ ಅಶೋಕ್ ವಾಲ್ಸಂದ್, ಕಲಬುರಗಿ ಪಿಆರ್​ಇ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ, ಸಣ್ಣೂರು ಗ್ರಾ.ಪಂ. ಪಿಡಿಒ ರಾಮಚಂದ್ರ ಮನೆ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಲೋಕಾಯಕ್ತ ದಾಳಿ ನಡೆದಿದೆ.

ಪ್ರಕಾಶ್ ಎಇ, ಬಿಬಿಎಂಪಿ, ಗೋವಿಂದರಾಜನಗರ, ಬೆಂಗಳೂರು. ಡಾ , ಎಸ್ ಪ್ರದೀಪ್, ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್ , ಅರ್ಗ್ಯಾನಿಕ್ ಫಾರ್ಮಿಂಗ್ ಶಿವಮೊಗ್ಗ. ಡಾ. ಎಸ್. ಪ್ರದೀಪ್, ಸಹಾಯಕ ಸಂಶೋಧನಾ ನಿರ್ದೇಶಕರು, ಅರ್ಗಾನಿಕ್ ಫಾರ್ಮಿಂಗ್ ಶಿವಮೊಗ್ಗ ಲತಾ ಮಣಿ, ಖಾತೆ ಅಧಿಕಾರಿ, ಯೌನ್ ನಗರಪಾಲಿಕೆ, ಚಿಕ್ಕಮಗಳೂರು. ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಆನೆಕಲ್. ಧ್ರುವರಾಜ್, ಪಟ್ಟಣ ಪೊಲೀಸ್ ನಿರೀಕ್ಷಕ, ಗದಗ. ಅಶೋಕ್ ವಾಲ್ಸಂದ್, ಎಂಜಿನಿಯರ್, ಮಲಪ್ರಭಾ ಯೋಜನೆ, ಧಾರವಾಡ. ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಲಬುರ್ಗಿ ರಾಮಚಂದ್ರ, ಪಿಡಿಒ, ಕಲಬುರ್ಗಿ ಇವರುಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!