ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಆಮಿರ್ ಖಾನ್ ಅವರು ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದು, ಪರಸ್ಪರ ಕುಶಲೋಪರಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅದೇ ವೇಳೆ ಆಮೀರ್ ಖಾನ್ ಅವರು ಸಹ ಅಲ್ಲಿಯೇ ಹಾಜರಿದ್ದರು.ಆಮಿರ್ ಖಾನ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮುಖಾಮುಖಿ ಆಗಿ ಪರಸ್ಪರ ಹಸ್ತಲಾಘವದ ಬಳಿಕ ಕೆಲ ಸಮಯ ಮಾತುಕತೆ ಆಡಿದ್ದಾರೆ. ಆಮಿರ್ ತಮ್ಮ ನೂತನ ಸಿನಿಮಾ ಸಿತಾರೆ ಝಮೀನ್ ಪರ್ ಬಗ್ಗೆ ಸಿಎಂ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ.