ಏರ್ ಇಂಡಿಯಾಗೆ ಟೈಮೇ ಸರಿ ಇಲ್ಲ! ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ, ಊಟದಲ್ಲಿ ವಿಷ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ.

ಏರ್​​ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಸೇರಿದಂತೆ ಆರೋಗ್ಯ ವ್ಯತ್ಯಾಸ ಕಂಡು ಬಂದಿದೆ.

ವಿಮಾನದಲ್ಲಿ ಆರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 11 ಜನರು ಅಸ್ವಸ್ಥರಾಗಿದ್ದಾರೆ. ಈ ವೇಳೆ ವಿಮಾನ ಮುಂಬೈನಲ್ಲಿ ಇಳಿದಿದೆ. ನಂತರ ಇಬ್ಬರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆಯು ಸಾಧ್ಯತೆ ಇರುತ್ತದೆ ಏಕೆಂದರೆ ಕ್ಯಾಬಿನ್‌ನಲ್ಲಿ​​​ ಒತ್ತಡ ಕೆಲಸಗಳು ಇರುತ್ತದೆ. ಆದರೆ ವಿಷಪ್ರಾಶನ ಆಗಿದ್ದೀಯಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಕಂಪನಿ ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!