ಕಡಿ ಗುಜರಾತಿ ಅಡಿಗೆಯ ಅತ್ಯುತ್ತಮ ಪಾಕವಿಧಾನಗಳಲ್ಲಿ ಒಂದಾಗಿದೆ. ಮೊಸರು, ಬೇಸನ್ ಮತ್ತು ಕರಿ ಮಸಾಲೆಗಳಿಂದ ತಯಾರಾಗುವ ಈ ಕಡಿ ಅನ್ನ, ಖಿಚಡಿ ಅಥವಾ ತರಕಾರಿ ಪುಲಾವ್ನೊಂದಿಗೆ ಬಡಿಸಿದರೂ ಉತ್ತಮ ರುಚಿ ಕೊಡುತ್ತದೆ.
ಬೇಕಾಗುವ ಪದಾರ್ಥಗಳು:
3/4 ಕಪ್ ಹುಳಿ ಮೊಸರು
2 ಕಪ್ ನೀರು
2½ ಚಮಚ ಕಡಲೆ ಹಿಟ್ಟು
1 ಟೀಸ್ಪೂನ್ ಹಸಿರು ಮೆಣಸಿನಕಾಯಿ – ಶುಂಠಿ ಪೇಸ್ಟ್
1/2 ಟೀಸ್ಪೂನ್ ಜಜ್ಜಿದ ಬೆಳ್ಳುಳ್ಳಿ,
1 ಚಮಚ ಸಕ್ಕರೆ
ಉಪ್ಪು
1 ಚಮಚ ಎಣ್ಣೆ ಅಥವಾ ತುಪ್ಪ
1/4 ಟೀಸ್ಪೂನ್ ಜೀರಿಗೆ
1/8 ಟೀಸ್ಪೂನ್ ಮೆಂತ್ಯ
1/4 ಟೀಸ್ಪೂನ್ ಸಾಸಿವೆ
2-3 ಲವಂಗ
1 ದಾಲ್ಚಿನ್ನಿ ಕಡ್ಡಿ
1 ಒಣ ಕೆಂಪು ಮೆಣಸಿನಕಾಯಿ
7-8 ಕರಿಬೇವು ಎಲೆಗಳು
ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲಿಗೆ ಮೊಸರು ಮತ್ತು ಕಡಲೆ ಹಿಟ್ಟನ್ನು ಸೇರಿಸಿ ಚನ್ನಾಗಿ ಬೀಟ್ ಮಾಡಿ. 2 ಕಪ್ ನೀರು ಸೇರಿಸಿ ಮತ್ತೆ ಬೀಟ್ ಮಾಡಿ. ತಯಾರಾದ ಮೊಸರು-ಕಡಲೆ ಹಿಟ್ಟು ಮಿಶ್ರಣವನ್ನು ಮಧ್ಯಮ ಗಾತ್ರದ ಉರಿಯಲ್ಲಿ ಕುದಿಸಿ. ಇದಕ್ಕೆ ಪುಡಿಮಾಡಿದ ಹಸಿರು ಮೆಣಸಿನಕಾಯಿ-ಶುಂಠಿ, ಬೆಳ್ಳುಳ್ಳಿ, ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಕಡಿಮೆ ಉರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಅಥವಾ ಕಡಲೆ ಹಿಟ್ಟಿನ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ಅಗತ್ಯವಿದ್ದರೆ ಹೆಚ್ಚು ನೀರು ಸೇರಿಸಿ.
ಈ ಮಧ್ಯೆ, ಒಂದು ಸಣ್ಣ ಪ್ಯಾನ್ನಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ ಒಗ್ಗರಣೆ ತಯಾರಿಸಿ. ಅದನ್ನು ಗುಜರಾತಿ ಕಡಿಯ ಮೇಲೆ ಸುರಿದು ಚೆನ್ನಾಗಿ ಮಿಶ್ರಣ ಮಾಡಿ. ಮತ್ತೆ 2-3 ನಿಮಿಷಗಳ ಕಾಲ ಕುದಿಯಲು ಬಿಡಿ. ಕೊನೆಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಗುಜರಾತಿ ಕಡಿ ರೆಡಿ.