Snacks | ಗರಿ ಗರಿಯಾದ ಚೀಸ್ ಬಾಲ್! ಮಾಡೋದು ಸುಲಭ ರುಚಿನೂ ಅದ್ಭುತ!

ಈ ಗರಿಗರಿಯಾದ ಚೀಸ್ ಸ್ಟಫ್ಡ್ ಆಲೂಗಡ್ಡೆ ಉಂಡೆಗಳನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ. ಎಲ್ಲರಿಗೂ ಇಷ್ಟ. ವಿಶೇಷವಾಗಿ ಮಕ್ಕಳು, ಅವುಗಳನ್ನು ಇಷ್ಟಪಡುತ್ತಾರೆ. ಇವತ್ತು ಸುಲಭವಾಗಿ ಆಲೂಗಡ್ಡೆ ಉಂಡೆ ಅಥವಾ ಚೀಸ್ ಬಾಲ್ ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

3 ಬೇಯಿಸಿದ ಆಲೂಗಡ್ಡೆ
100 ಗ್ರಾಂ ಮೊಝ್ಝಾರೆಲ್ಲಾ ಚೀಸ್ ಅಥವಾ ಚೆಡ್ಡಾರ್ ಚೀಸ್
3 ಚಮಚ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ
1/2 ಟೀಸ್ಪೂನ್ ರೆಡ್ ಚಿಲ್ಲಿ ಫ್ಲೇಕ್ಸ್
1/2 ಟೀಸ್ಪೂನ್ ಪಿಜ್ಜಾ ಸೀಸನಿಂಗ್ಸ್
1/4 ಟೀಸ್ಪೂನ್ ಕರಿಮೆಣಸಿನ ಪುಡಿ
1/2 ಟೀಸ್ಪೂನ್ ತುರಿದ ಬೆಳ್ಳುಳ್ಳಿ (ಅಥವಾ ಪೇಸ್ಟ್)
2 ಚಮಚ ಮೈದಾ
2 ಚಮಚ ಕಾರ್ನ್‌ಸ್ಟಾರ್ಚ್
1/4 ಕಪ್ ನೀರು
1/2 ಕಪ್ ಬ್ರೆಡ್ ಕ್ರಂಬ್ಸ್
ಎಣ್ಣೆ, ಡೀಪ್ ಫ್ರೈಗೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಆಲೂಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ರೆಡ್ ಚಿಲ್ಲಿ ಫ್ಲೇಕ್ಸ್, ಪಿಜ್ಜಾ ಮಸಾಲೆಗಳು ಮತ್ತು ಕರಿಮೆಣಸಿನ ಪುಡಿ, ತುರಿದ ಬೆಳ್ಳುಳ್ಳಿ, ಬ್ರೆಡ್ ಕ್ರಂಬ್ಸ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಗಳಾಗಿ ಮಾಡಿ ಇಟ್ಟುಕೊಳ್ಳಿ.

ಒಂದು ಸಣ್ಣ ಬಟ್ಟಲಿನಲ್ಲಿ 2 ಚಮಚ ಕಾರ್ನ್‌ಸ್ಟಾರ್ಚ್ (ಬಿಳಿ ಕಾರ್ನ್‌ಫ್ಲೋರ್) ಮತ್ತು 2 ಚಮಚ ಮೈದಾ, ನೀರನ್ನು (ಸುಮಾರು 1/4 ಕಪ್) ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಮತ್ತು ಮಧ್ಯಮ ದಪ್ಪ ಪೇಸ್ಟ್ ತಯಾರಿಸಿ.

ಚೀಸ್ ಅನ್ನು 10 ಸಣ್ಣ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಆಲೂಗಡ್ಡೆಯ ಉಂಡೆಯೊಳಗೆ ಇಟ್ಟು ಮತ್ತೆ ಚೆಂಡಿನ ಆಕಾರ ನೀಡಿ. ಈ ಉಂಡೆಯನ್ನು ಕಾರ್ನ್‌ಫ್ಲೋರ್-ಮೈದಾ ಪೇಸ್ಟ್‌ನಲ್ಲಿ ಅದ್ದಿ. ಮತ್ತೆ ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಾಡಿಸಿ ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಡೀಪ್ ಫ್ರೈ ಮಾಡಿದರೆ ಚೀಸ್ ಬಾಲ್ ರೆಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!