ಮದ್ಯದಂಗಡಿ ಮಾಲೀಕರಿಗೆ ಗುಡ್ ನ್ಯೂಸ್: ಲೈಸೆನ್ಸ್ ನವೀಕರಣ ಶುಲ್ಕ ಇಳಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯದ ಅಂಗಡಿ ಮಾಲೀಕರ ಒತ್ತಡಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದ್ದು, ಲೈಸೆನ್ಸ್ ನವೀಕರಣ ಶುಲ್ಕವನ್ನು ಇಳಿಸಿದೆ.

ಅಬಕಾರಿ ಲೈಸೆನ್ಸ್ ನವೀಕರಣ ಶುಲ್ಕವನ್ನು ಶೇಕಡಾ 50ರಷ್ಟು ಇಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದಲ್ಲಿ ಅಬಕಾರಿ ವರ್ಷ ಜುಲೈನಿಂದ ಆರಂಭವಾಗಲಿದ್ದು, ರಾಜ್ಯದಲ್ಲಿ ಎಲ್ಲ ಅಬಕಾರಿ ಸನ್ನದುದಾರರು ತಮ್ಮ ಲೈಸನ್ಸ್​ಗಳನ್ನು ನವೀಕರಣ ಮಾಡಿಕೊಳ್ಳುತ್ತಾರೆ. ಇದನ್ನು ಗಮನಿಸಿಯೇ ಸರ್ಕಾರ ಲೈಸನ್ಸ್​ ನವೀಕರಣ ಶುಲ್ಕವನ್ನು ಬರೋಬ್ಬರಿ ಶೇ 100 ರಷ್ಟು ಹೆಚ್ಚಳ ಮಾಡಿತ್ತು. ಈ ಪರಿಷ್ಕೃತ ದರ ಜುಲೈ 1 ರಿಂದ ಜಾರಿಯಾಗಲಿತ್ತು. ಈ ಮೂಲಕ ಸರ್ಕಾರ ಸನ್ನದ್ದು ಶುಲ್ಕದಿಂದ 879 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿತ್ತು.ಆದರೆ, ಸರ್ಕಾರದ ಈ ಆದೇಶದಿಂದ ಮದ್ಯದಂಗಡಿ ಮಾಲೀಕರಿಗೆ ಸಾಕಷ್ಟು ಹೊರೆಯಾಗುತ್ತಿತ್ತು. ಹೀಗಾಗಿ, ಮದ್ಯದಂಗಡಿ ಮಾಲೀಕರು ಲೈಸನ್ಸ್ ನವೀಕರಣ​ ಶುಲ್ಕ ಏರಿಸಿದ್ದಕ್ಕೆ ಪ್ರತಿಭಟನೆ ನಡೆಸಿ, ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ ಸನ್ನದುದಾರರ ಲೈಸನ್ಸ್​ ನವೀಕರಣ ಶುಲ್ಕವನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಈ ಪರಿಷ್ಕೃತ ದರ ಜುಲೈ 1ರಿಂದ ಜಾರಿಗೆ ಬರಲಿದೆ.

CL9 ಬಾರ್ ಆ್ಯಂಡ್‌ ರೆಸ್ಟೋರೆಂಟ್​ಗೆ ಈ ಮೊದಲು ಲೈಸೆನ್ಸ್ ಶುಲ್ಕ 8,62,000 ರೂ. ಇತ್ತು. ಈಗ ಅದನ್ನು 15,00,000 ರೂ.ಗೆ ಹೆಚ್ಚಿಸಲು ಮುಂದಾಗಿತ್ತು. ಸೆಸ್ 2,25,000 ರೂ. ಸೇರಿ ಒಟ್ಟು ಒಟ್ಟು 17,25,000 ರೂ. ಆಗಲಿತ್ತು.CL 6A ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದಿದ್ದು 20 ಲಕ್ಷ ರೂ. ಮಾಡಲಾಗಿತ್ತು. ಇದಕ್ಕೆ ಸೆಸ್ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿತ್ತು.CL 7 ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದದ್ದು 17,00,000 ರೂ.ಗೆ ಏರಿಕೆಯಾಗಲಿತ್ತು. ಸೆಸ್ 2,55,000 ರೂ. ಸೇರಿ ಒಟ್ಟು 19,550,00 ರೂ. ಆಗಲಿತ್ತು. ಇದೀಗ, ಶೇ 50 ರಷ್ಟು ಕಡಿಮೆ ಮಾಡಿದ್ದರಿಂದ ಲೈಸೆನ್ಸ್​ ನವೀಕರಣ ಶುಲ್ಕ ಅರ್ಧದಷ್ಟು ಕಡಿಮೆಯಾಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!