ಪಾಲಕ್ ಚಪಾತಿ ಆರೋಗ್ಯಕರ ಮತ್ತು ರುಚಿಕರವಾದ ಬೆಳಗಿನ ಉಪಹಾರವಾಗಿದೆ. ಇದರಲ್ಲಿ ಪಾಲಕ್ (ಸ್ಪಿನಾಚ್) ಮತ್ತು ಗೋಧಿಹಿಟ್ಟು ಬಳಸಲಾಗುತ್ತದೆ. ಪಾಲಕ್‌ನಲ್ಲಿ ದೊರೆಯುವ ಆಯರನ್, ವಿಟಮಿನ್ A, C ಮತ್ತು ಕಬ್ಬಿಣದಾಂಶವು ಈ ಚಪಾತಿಯನ್ನು ಪೋಷಕಾಂಶ ಪೂರ್ಣವಾಗಿಸುತ್ತದೆ. ಮಕ್ಕಳಿಂದ ಹಿಡಿದು ವೃದ್ಧರೆವರೆಗೂ ಎಲ್ಲರಿಗೂ ಇಷ್ಟವಾಗುವ ಈ ಚಪಾತಿ ಬೆಳಗಿನ ಉಪಹಾರ ಅಥವಾ ರಾತ್ರಿ ಊಟಕ್ಕೆ ಮಾಡಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು:
1½ ಕಪ್ ಗೋಧಿ ಹಿಟ್ಟು
3/4 ಕಪ್ ಕತ್ತರಿಸಿದ ಪಾಲಕ್
1/2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
3 ಬೆಳ್ಳುಳ್ಳಿ
1 ಹಸಿರು ಮೆಣಸಿನಕಾಯಿ, ಕತ್ತರಿಸಿದ್ದು
2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
3 ಚಮಚ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಬೆಣ್ಣೆ
ಮಾಡುವ ವಿಧಾನ:
ಮೊದಲಿಗೆ ಪಾಲಕ್ ಸೊಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ನಲ್ಲಿ ಹಾಕಿ ನಯವಾದ ಪ್ಯೂರಿ ಮಾಡಿ.
ಈಗ ಒಂದು ಬಟ್ಟಲಿನಲ್ಲಿ 1½ ಕಪ್ ಗೋಧಿ ಹಿಟ್ಟು, 2 ಚಮಚ ಎಣ್ಣೆ, ಉಪ್ಪು ಮತ್ತು ತಯಾರಿಸಿದ ಪಾಲಕ್ ಪ್ಯೂರಿಯನ್ನು ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಂಡು 20 ನಿಮಿಷಗಳ ಕಾಲ ಬಿಡಿ.
ಈಗ ಇಅದನ್ನು ಉಂಡೆಗಳಾಗಿ ಮಾಡಿ ಚಪಾತಿ ಲಟ್ಟಿಸಿ ಎಣ್ಣೆ ಅಥವಾ ಬೆಣ್ಣೆಯೊಂದಿಗೆ ಎರಡು ಬದಿ ಬೇಯಿಸಿಕೊಂಡರೆ ಪಾಲಕ್ ಚಪಾತಿ ರೆಡಿ.