ಶತಕಗಳ ಸುರಿಮಳೆ ಸುರಿಸಿದ್ರು ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ! ದಾಖಲೆ ರನ್​ ಚೇಸ್​ ಮಾಡಿ ಗೆದ್ದು ಬೀಗಿದ ಇಂಗ್ಲೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐದು ಪಂದ್ಯಗಳ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಪ್ರವಾಸ ಮಾಡಿರುವ ಟೀಂ ಇಂಡಿಯಾ, ಆರಂಭಿಕ ಪಂದ್ಯದಲ್ಲೇ ಸೋಲನ್ನು ಅನುಭವಿಸಿದೆ. ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ 371 ರನ್‌ಗಳ ಗುರಿಯನ್ನು ಆತಿಥೇಯ ಇಂಗ್ಲೆಂಡ್ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ತಲುಪಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.

ಈ ಸೋಲಿಗೆ ಟೀಂ ಇಂಡಿಯಾದ ಫೀಲ್ಡಿಂಗ್ ಮತ್ತು ಬೌಲಿಂಗ್ ವೈಫಲ್ಯ ಮುಖ್ಯ ಕಾರಣವೆನಿಸಿತು. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿದರೆ ಉಳಿದ ಬೌಲರ್‌ಗಳು ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಟೀಂ ಇಂಡಿಯಾ ಈ ಪಂದ್ಯದಲ್ಲಿ 6 ಕ್ಯಾಚ್‌ಗಳನ್ನು ಬಿಟ್ಟಿದ್ದು, ಅದರಲ್ಲಿ ನಾಲ್ಕು ಕ್ಯಾಚ್‌ಗಳನ್ನು ಯಶಸ್ವಿ ಜೈಸ್ವಾಲ್ ಕೈಬಿಟ್ಟರು. ಈ ಎಲ್ಲವುಗಳು ಸೋಲಿಗೆ ಕಾರಣವಾಯಿತು.

ವಿಶೇಷವೆಂದರೆ, ಭಾರತ ಐದು ಶತಕದಾರರನ್ನಿಟ್ಟುಕೊಂಡು ಸೋಲಿಗೆ ಒಳಗಾದ ಅಪರೂಪದ ದಾಖಲೆಯ ತಂಡವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ (101), ಗಿಲ್ (147), ಪಂತ್ (134), ರಾಹುಲ್ (42), ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ (137), ಪಂತ್ (118) ಶತಕ ಬಾರಿಸಿದರು.

ಇಂಗ್ಲೆಂಡ್ ಪರ, ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ ಡಕೆಟ್ (149) ಅವರ ಶತಕ, ಜಾಕ್ ಕ್ರಾಲೆ (65), ಜೋ ರೂಟ್ (ಅಜೇಯ 53), ಮತ್ತು ಜೇಮಿ ಸ್ಮಿತ್ (ಅಜೇಯ 44) ಗೆಲುವಿಗೆ ಕಾರಣರಾದರು. ಇಂಗ್ಲೆಂಡ್ ಈ ಪಂದ್ಯದಲ್ಲಿ ಲೀಡ್ಸ್ ಪಿಚ್‌ನಲ್ಲಿ ಗರಿಷ್ಠ ಚೇಸ್ ದಾಖಲೆಯನ್ನೂ ಬರಿದಿಟ್ಟಿತು.

ಎರಡನೇ ಟೆಸ್ಟ್ ಜುಲೈ 2 ರಿಂದ ಬರ್ಮಿಂಗ್‌ಹ್ಯಾಂನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!