ಹಣ್ಣುಗಳ ಜಗತ್ತಿನಲ್ಲಿ ಹಲಸಿನ ಹಣ್ಣು (Jackfruit) ತನ್ನದೇ ಆದ ಪ್ರಭಾವವನ್ನಿಟ್ಟುಕೊಂಡಿದೆ. ಕೆಲವೊಮ್ಮೆ “ಹಣ್ಣಿನ ರಾಜ” ಅನ್ನುವವರೆಗೂ ಇದರ ಹೊಗಳಿಕೆ ಕೇಳಿ ಬರುತ್ತದೆ. ಹಣ್ಣಿನ ವಿಚಾರದಲ್ಲಿ ಇತರೆ ಹಣ್ಣುಗಳಿಗಿಂತ ಒಂದು ಕೈಮೇಲೆ ಎಂಬಂತೆ ರುಚಿ ಹಾಗೂ ಆರೋಗ್ಯಕ್ಕೂ ಸಮಾನವಾಗಿ ಮಹತ್ವ ಹೊಂದಿರುವ ಹಲಸಿನ ಹಣ್ಣು, ಹಳ್ಳಿಗಳಿಂದ ಹಿಡಿದು ನಗರದ ಮಾರ್ಕೆಟ್ಗಳವರೆಗೂ ಭಾರೀ ಬೇಡಿಕೆ ಇದೆ.
ಈ ಹಣ್ಣು ಗಾತ್ರದಲ್ಲಿ ದೊಡ್ಡದಾಗಿರುವಷ್ಟೆ, ಇದರ ಆರೋಗ್ಯ ಲಾಭಗಳೂ ಅಷ್ಟೇ ಗಾತ್ರದಲ್ಲಿವೆ. ಆದರೆ ಇನ್ನೂ ಸಾಕಷ್ಟು ಜನರಿಗೆ ಈ ಹಣ್ಣಿನ ಸರ್ವೋತ್ತಮ ಉಪಯೋಗಗಳ ಬಗ್ಗೆ ತಿಳುವಳಿಕೆ ಇಲ್ಲ. ಇದೀಗ ಅದು ಏನೆಲ್ಲಾ ಆರೋಗ್ಯ ಲಾಭ ನೀಡುತ್ತದೆ ಎಂಬ ಮಾಹಿತಿ ನೋಡೋಣ.
ರಕ್ತದೊತ್ತಡ ನಿಯಂತ್ರಣ:
ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇದ್ದು. ಇದು ಹೆಚ್ಚುವರಿ ಸೋಡಿಯಂ ನಿವಾರಣೆಗೆ ಸಹಾಯ ಮಾಡಿ ರಕ್ತದೊತ್ತಡ ನಿಯಂತ್ರಣಕ್ಕೆ ಕಾರಣವಾಗುತ್ತದೆ. ಜೊತೆಗೆ, ವಿಟಮಿನ್ ಸಿ, ಕ್ಯಾರೊಟಿನಾಯ್ಡ್ಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ.
ಮಲಬದ್ಧತೆ ನಿವಾರಣೆ:
ಈ ಹಣ್ಣಿನ ನಾರು ಅಂಶವು ಮಲಬದ್ಧತೆ ನಿವಾರಣೆ ಗೊಳಿಸಿ. ಮಲ ವಿಸರ್ಜನೆ ಸುಲಭಗೊಳಿಸುತ್ತದೆ. ಈ ಮೂಲಕ ಮಲಬದ್ಧತೆಯ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ.
ಮಧುಮೇಹ ನಿಯಂತ್ರಣ:
ನಾರಿನಂಶ ಹೆಚ್ಚಿರುವುದರಿಂದ, ಈ ಹಣ್ಣು ಕಾರ್ಬೋಹೈಡ್ರೇಟ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನ ನಿಯಂತ್ರಿಸುತ್ತದೆ.
ರಕ್ತಹೀನತೆಗೆ ಪರಿಹಾರ:
ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಕಾರಣ, ಹಲಸಿನಹಣ್ಣು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಕಡಿಮೆ ರಕ್ತದ ಮಟ್ಟ ಅಥವಾ ರಕ್ತಹೀನತೆಯನ್ನು ತಡೆಯುತ್ತದೆ.
ರೋಗನಿರೋಧಕ ಶಕ್ತಿ:
ಹಲಸಿನ ಹಣ್ಣಿನಲ್ಲಿರುವ ವಿಟಮಿನ್ ಸಿ, ಕ್ಯಾರೊಟಿನಾಯ್ಡ್ಗಳು ಮತ್ತು ಸಪೋನಿನ್ಗಳಂತಹ ಉತ್ಕರ್ಷಣ ನಿರೋಧಕಗಳು, ರೋಗನಿರೋಧಕ ವ್ಯವಸ್ಥೆಯ ಕೋಶಗಳನ್ನು ಸ್ವತಂತ್ರ ರಾಡಿಕಲ್ಗಳಿಂದ ಬಲಪಡಿಸುತ್ತವೆ ಮತ್ತು ರಕ್ಷಿಸುತ್ತವೆ, ಜೊತೆಗೆ ನಿಮ್ಮ ದೇಹವನ್ನು ವಿವಿಧ ರೀತಿಯ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಂದ ರಕ್ಷಿಸುತ್ತವೆ.
ಕೊಲೆಸ್ಟ್ರಾಲ್ ಹತೋಟಿ:
ಹಲಸಿನಹಣ್ಣು ಕರುಳಿನಲ್ಲಿನ ಕೊಬ್ಬಿನ ಹೀರುವಿಕೆಯನ್ನು ಕಡಿಮೆ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ಮನಃಸ್ಥಿತಿ ಸುಧಾರಣೆ:
ನಿಮ್ಮ ದೈಹಿಕ ಆರೋಗ್ಯವನ್ನು ನೋಡಿಕೊಳ್ಳುವುದರ ಜೊತೆಗೆ, ಹಲಸಿನಹಣ್ಣು ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ಗಳ ಸಹಾಯದಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಹಲಸಿನ ಹಣ್ಣು ಕೇವಲ ರುಚಿಗೆ ಅಲ್ಲ, ಆರೋಗ್ಯಕ್ಕೂ ಅಮೂಲ್ಯ. ಇದರ ಲಾಭಗಳನ್ನು ಮನದಟ್ಟು ಮಾಡಿಕೊಂಡು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.