ಮಹಾವತಾರ್ ಸಿನಿಮಾಟಿಕ್ ಯುನಿವರ್ಸ್‌ಗೆ ಹೊಂಬಾಳೆ ಎಂಟ್ರಿ! ಜುಲೈನಲ್ಲೇ ಫಸ್ಟ್ ಮೂವಿ ರಿಲೀಸ್ ! ಒಂದೇ ಸಲ 7 ಸಿನಿಮಾ ಅನೌನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಜಿಎಫ್ ಮತ್ತು ಕಾಂತಾರದಂತಹ ಬ್ಲಾಕ್‌ಬಸ್ಟರ್‌ಗಳಿಂದ ಭಾರತದ ಚಿತ್ರರಂಗದಲ್ಲಿ ಹೆಸರಾಗಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಮೂಲಕ ದೇಶದಾದ್ಯಂತ ಮತ್ತೆ ಚರ್ಚೆಗೆ ಕಾರಣವಾಗಿದೆ. ‘ಸಾಧ್ಯತೆಗಳಿಗೆ ಅಂತ್ಯವಿಲ್ಲ’ ಎಂಬ ಘೋಷಣೆಯೊಂದಿಗೆ, ಈ ಬಾರಿ ಸಂಸ್ಥೆ ಏಕಕಾಲಕ್ಕೆ ಏಳು ಅದ್ದೂರಿ ಸಿನಿಮಾಗಳನ್ನು ಘೋಷಿಸಿದ್ದು, ಸಿನಿಮಾ ಪ್ರೇಮಿಗಳಿಗೆ ಅದ್ಭುತ ಸರ್ಪ್ರೈಸ್ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ “ಸಾಧ್ಯತೆಗಳಿಗೆ ಅಂತ್ಯವಿಲ್ಲ. ನಮ್ಮ ಕಥೆಗಳನ್ನು ಪರದೆಯ ಮೇಲೆ ಜೀವಂತವಾಗಿ ನೋಡಲು ನಾವು ಉತ್ಸುಕರಾಗಿದ್ದೇವೆ. ಮಹಾಕಾವ್ಯದ ಸಿನಿಮೀಯ ಸವಾರಿಗಾಗಿ ಸಿದ್ಧರಾಗಿ!” ಎಂದು ಬರೆದುಕೊಂಡಿದೆ.

ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಸಂಯುಕ್ತವಾಗಿ, ದೇವತಾ ಕಥೆಗಳ ಆಧಾರದ ಮೇಲೆ ‘ಮಹಾವತಾರ್ ಸಿನಿಮಾಟಿಕ್ ಯುನಿವರ್ಸ್’ ಎಂಬ ಮಾದರಿಯನ್ನು ಘೋಷಿಸಿದೆ. ಇದು ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ಆಧರಿಸಿದ 7 ಅದ್ಭುತ ಚಿತ್ರಗಳ ಸರಣಿ ಆಗಿದ್ದು, ಒಂದು ದಶಕಕ್ಕಿಂತ ಹೆಚ್ಚು ಕಾಲ ಚಲನಚಿತ್ರ ರಂಗದಲ್ಲಿ ವಿಸ್ತರಿಸಲಿದೆ.

ಸಿನಿಮಾ ರಿಲೀಸ್ ಕ್ಯಾಲೆಂಡರ್
ಮಹಾವತಾರ್ ನರಸಿಂಹ – ಜುಲೈ 25, 2025
(3D ಮತ್ತು 5 ಭಾರತೀಯ ಭಾಷೆಗಳಲ್ಲಿ ಬಿಡುಗಡೆ)

ಮಹಾವತಾರ್ ಪರಶುರಾಮ್ – 2027

ಮಹಾವತಾರ್ ರಘುನಂದನ್ (ರಾಮ ಅವತಾರ) – 2029

ಮಹಾವತಾರ್ ದ್ವಾರಕಾಧೀಶ್ (ಕೃಷ್ಣ ಅವತಾರ) – 2031

ಮಹಾವತಾರ್ ಗೋಕುಲಾನಂದ – 2033

ಮಹಾವತಾರ್ ಕಲ್ಕಿ ಪಾರ್ಟ್ 1 – 2035

ಮಹಾವತಾರ್ ಕಲ್ಕಿ ಪಾರ್ಟ್ 2 – 2037

ಇದು ಭಾರತದಲ್ಲಿ ಮೊದಲ ಬಾರಿಗೆ ತಯಾರಾಗುತ್ತಿರುವ ಧಾರ್ಮಿಕ ಆಧಾರಿತ ಸಿನಿಮಾ ಯುನಿವರ್ಸ್. ಪ್ರತಿಯೊಂದು ಸಿನಿಮಾಗೂ ವಿಶಿಷ್ಟ ಕಾಲಘಟ್ಟ, ಕಥೆ, ದೈವಿಕ ನೈಜತೆ ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, 3D ಪ್ರಾಜೆಕ್ಷನ್ ಹಾಗೂ ಐದು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗುತ್ತಿರುವುದು ವಿಶೇಷ ಆಕರ್ಷಣೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!