ನೇರಳೆ ಹಣ್ಣುಗಳು (Jamun) ಕೇವಲ ರುಚಿಯಲ್ಲದೆ ಆರೋಗ್ಯಕ್ಕೆ ಬಹುಮಟ್ಟಿಗೆ ಲಾಭಕಾರಿ ಎಂಬುದಾಗಿ ತಜ್ಞರು ಹೇಳುತ್ತಾರೆ. ಹೆಚ್ಚಿನವರು ಈ ಹಣ್ಣುಗಳನ್ನು ತಿನ್ನುವಾಗ ಅದರ ಬೀಜಗಳನ್ನು ಬಿಸಾಡಿ ಬಿಡುತ್ತಾರೆ. ಆದರೆ, ನೇರಳೆ ಬೀಜಗಳು ಆಯುರ್ವೇದ ಮತ್ತು ಆರೋಗ್ಯ ತಜ್ಞರ ಪ್ರಕಾರ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ.
ಜಾಮೂನು ಬೀಜಗಳಲ್ಲಿ ಇರುವ ಪೋಷಕಾಂಶಗಳು
ಫೈಬರ್, ಪ್ರೋಟೀನ್, ಒಮೆಗಾ-3 ಮತ್ತು 6, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಇ, ಫ್ಲೇವನಾಯ್ಡ್, ಜಾಂಬೋಲಿನ್ ಹಾಗೂ ಜಾಂಬೊಸಿನ್ ಮೊದಲಾದ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಲಭ್ಯವಿದೆ.
ಮುಖ್ಯ ಆರೋಗ್ಯ ಪ್ರಯೋಜನಗಳು:
ಮಧುಮೇಹ ನಿಯಂತ್ರಣ: ಜಾಂಬೋಲಿನ್ ಮತ್ತು ಜಾಂಬೊಸಿನ್ ಸಂಯುಕ್ತಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ದಿನಕ್ಕೆ ಎರಡು ಬಾರಿ ಜಾಮೂನು ಬೀಜ ಪುಡಿ ಸೇವನೆಯಿಂದ ಟೈಪ್ 2 ಡಯಾಬಿಟಿಸ್ ನ್ನು ನಿಯಂತ್ರಣದಲ್ಲಿರಿಸಬಹುದು.
ಯಕೃತ್ ಆರೋಗ್ಯ: ಈ ಬೀಜಗಳಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು ಲಿವರ್‌ನ ಆರೋಗ್ಯವನ್ನು ಬೆಂಬಲಿಸುತ್ತವೆ.
ಜೀರ್ಣಕ್ರಿಯೆ ಸುಧಾರಣೆ: ಹೆಚ್ಚಿನ ಫೈಬರ್‌ನಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
ರೋಗನಿರೋಧಕ ಶಕ್ತಿ: ವಿಟಮಿನ್ ಸಿ ಮುಂತಾದವುಗಳಿಂದ ಶೀತ, ಜ್ವರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.
ಹೃದಯ ಆರೋಗ್ಯ: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಪಾರ್ಶ್ವವಾಯು ಅಪಾಯವನ್ನು ತಡೆಯಲು ಸಹಕಾರಿ.
ಮೂಳೆ ಮತ್ತು ಚರ್ಮದ ಆರೋಗ್ಯ: ಕ್ಯಾಲ್ಸಿಯಂ, ಮೆಗ್ನೀಸಿಯಂ, ಆ್ಯಂಟಿಆಕ್ಸಿಡೆಂಟ್‌ಗಳಿಂದ ಮೂಳೆಗಳ ದೃಢತೆ ಮತ್ತು ಚರ್ಮದ ತಾಜಾತನವನ್ನು ಕಾಪಾಡಲು ಸಹಾಯವಾಗುತ್ತದೆ.
ಕೂದಲ ಬೆಳವಣಿಗೆ: ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಕೂದಲಿನ ಬೆಳವಣಿಗೆಯಲ್ಲಿ ಸಹಕಾರಿ.
ಹೇಗೆ ಸೇವಿಸಬೇಕು?
ಬೀಜಗಳನ್ನು ಒಣಗಿಸಿ ಪುಡಿಮಾಡಿ, ದಿನಕ್ಕೆ ಎರಡು ಬಾರಿ ನೀರು ಅಥವಾ ಹಾಲಿನೊಂದಿಗೆ ಸೇವಿಸಬಹುದು. ನೇರವಾಗಿ ಬೀಜ ತಿನ್ನುಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಸೂಚನೆ: ಈ ಮಾಹಿತಿಯನ್ನು ವೈದ್ಯರ ಸಲಹೆ ಇಲ್ಲದೆ ಔಷಧಿ ಪರ್ಯಾಯವಾಗಿ ಬಳಸಬಾರದು. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)