ವಿಂಗ್ ಕಮಾಂಡರ್ ಅಭಿನಂದನ್​​ರನ್ನು ಸೆರೆ ಹಿಡಿದಿದ್ದ ಪಾಕ್ ಮೇಜರ್ ಎನ್‌ಕೌಂಟರ್‌ನಲ್ಲಿ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದಿದ್ದ ಪಾಕಿಸ್ತಾನ ಮೇಜರ್ ಮೊಯಿಜ್ ಅಬ್ಬಾಸ್ ಶಾ ದಕ್ಷಿಣ ವಜೀರಿಸ್ತಾನದ ಸರ್ಗೋಧಾದಲ್ಲಿ ಟಿಟಿಪಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನ ಸೇನೆಯ ಪ್ರಕಾರ, ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನ್ ಟಿಟಿಪಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಟಿಟಿಪಿಯ 11 ಸದಸ್ಯರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.

ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯ ಪ್ರಕಾರ, ಜೂನ್ 24, 2025 ರಂದು, ಭದ್ರತಾ ಪಡೆಗಳು ದಕ್ಷಿಣ ವಜೀರಿಸ್ತಾನ್ ಜಿಲ್ಲೆಯ ಸರೋಘಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದವು. ಈ ಕಾರ್ಯಾಚರಣೆಯಲ್ಲಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನ್ ಸಾವನ್ನಪ್ಪಿದ್ದಾರೆ.

ಪಾಕ್‌ ಗಡಿಯೊಳಗೆ ಉಗ್ರಗಾಮಿ ಗುಂಪುಗಳು ಒಳನುಸುಳುತ್ತಿವೆ. ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಿ ಆಗಾಗ ಉಗ್ರಗಾಮಿಗಳು ದಾಳಿ ನಡೆಸುತ್ತಿದ್ದಾರೆ. ಅವರನ್ನು ನಿಗ್ರಹಿಸಲು ಪಾಕ್‌ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು.

ಅಭಿನಂದನ್‌ ಸೆರೆ
2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಬಿಕ್ಕಟ್ಟು ಹೆಚ್ಚಾಗಿತ್ತು. ಭಾರತದ ಬಾಲಕೋಟ್ ವೈಮಾನಿಕ ದಾಳಿಯ ನಂತರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತೀಕಾರದ ಕಾರ್ಯಾಚರಣೆಯ ಸಮಯದಲ್ಲಿ ಮಿಗ್-21 ಬೈಸನ್ ಜೆಟ್ ಅನ್ನು ಹಾರಿಸಿದರು. ಪಾಕಿಸ್ತಾನಿ ವಾಯುಪಡೆಯ ಜೆಟ್‌ಗಳೊಂದಿಗಿನ ಕಾದಾಟದಲ್ಲಿ ಇವರ ಜೆಟ್‌ ಹೊಡೆದುರುಳಿಸಲಾಯಿತು. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಜೆಟ್‌ ಬಿದ್ದಿತು. ಅಲ್ಲಿ ಅಭಿನಂದನ್‌ ಅವರನ್ನು ಪಾಕಿಸ್ತಾನಿ ಸೇನೆ ಸೆರೆಹಿಡಿಯಿತು. ಇವರನ್ನು ಸೆರೆಹಿಡಿಯುವಲ್ಲಿ ತಾನು ಪಾತ್ರ ವಹಿಸಿದ್ದೇನೆ ಎಂದು ಪಾಕ್‌ನ ಅಬ್ಬಾಸ್‌ ಹೇಳಿಕೊಂಡಿದ್ದನು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!