ಹೊಸದಿಗಂತ ವರದಿ, ಬಂಟ್ವಾಳ:
ಬಿ.ಸಿ.ರೋಡ್ , ಅಡ್ಡಹೊಳೆ ಚತುಷ್ಪಥ ಹೆದ್ದಾರಿ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಕಲ್ಲಡ್ಕ ಫ್ಲೈಓವರ್ ನ ಒಂದು ಭಾಗ ಸಂಚಾರಕ್ಕೆಂದು ತೆರೆದುಕೊಂಡಿತ್ತು. ಇದೀಗ ಇನ್ನೊಂದು ಭಾಗದಲ್ಲೂ ಬುಧವಾರ ಸಂಜೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾದ ಹಿನ್ನಲೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಫ್ಲೈಓವರ್ ನಲ್ಲಿ ಸಂಚರಿಸಬಹುದಾಗಿದೆ.
ಜೂನ್ 2ರಂದು ಕಲ್ಲಡ್ಕ ಫ್ಲೈಓವರ್ ನ ಒಂದು ಭಾಗ ಸಂಚಾರಕ್ಕೆಂದು ತೆರೆದುಕೊಂಡಿತ್ತು.ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇನ್ನೊಂದು ಭಾಗದಲ್ಲೂ ಬುಧವಾರ ಸಂಜೆಯ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಪ್ಲೈಒವರ್ ನಲ್ಲಿ ಸರಾಗವಾಗಿ ಯಾವುದೇ ಅಡೆತಡೆ ಇಲ್ಲದೆ ವಾಹನ ಸಂಚರಿಸಬಹುದಾಗಿದೆ.