ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನ ಹೆಲ್ತ್ ಕಾನ್ಶಿಯಸ್ ಆಗ್ತಿದ್ದಾರೆ. ಬೇರೆ ಎಣ್ಣೆಗಳನ್ನು ಬಿಟ್ಟು ಕೊಬ್ಬರಿ ಎಣ್ಣೆಯತ್ತ ಮುಖ ಮಾಡುತ್ತಿದ್ದಾರೆ ಇದೇ ಕಾರಣಕ್ಕೆ ದರವೂ ಏರಿಕೆಯಾಗುತ್ತಿದ್ದು, ಲೀಟರ್‌ಗೆ 200 ರೂ. ದಾಟಿದೆ.
ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವಕ್ಕೆ ಕಾರಣವಾಗಿದೆ. ಪ್ರತಿ ಕೆಜಿಗೆ 150 ರಿಂದ 200 ರೂ. ಇದ್ದ ಕೊಬ್ಬರಿ ದರ ಇದೀಗ ಕೆಜಿಗೆ 250 ರಿಂದ 280 ರೂಪಾಯಿಗೆ ಜಿಗಿತ ಕಂಡಿದೆ.
ಕಳೆದ ವರ್ಷ ಲೀಟರ್‌ಗೆ 200 ರೂಪಾಯಿಯಷ್ಟಿದ್ದ ಕೊಬ್ಬರಿ ಎಣ್ಣೆ ದರ ಈಗ 390 ರೂ.ಗಳಿಂದ 420 ರೂ. ವರೆಗೆ ಏರಿಕೆ ಕಂಡಿದೆ. ಕೆಲವೆಡೆ ಉತ್ತಮ ಗುಣಮಟ್ಟದ ಕೊಬ್ಬರಿ ಎಣ್ಣೆ ಪ್ರತಿ ಲೀಟರ್‌ಗೆ 500 ರೂಪಾಯಿ ತನಕ ಮಾರಾಟವಾಗುತ್ತಿದೆ.
ಈ ವರ್ಷದ ಹೊಸ ತೆಂಗಿನಕಾಯಿ ಇಳುವರಿ ಅಕ್ಟೋಬರ್–ನವೆಂಬರ್ ವೇಳೆಗೆ ಬರುವ ನಿರೀಕ್ಷೆಯಿದ್ದು, ಅಲ್ಲಿ ತನಕ ಮಾರುಕಟ್ಟೆಗೆ ಒಣಕೊಬ್ಬರಿ ಬರುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯ ಕೇರಳ, ತಮಿಳುನಾಡಿನಿಂದಲೂ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಬರುತ್ತಿಲ್ಲ. ಇದು ವ್ಯಾಪಾರಿಗಳಿಗೂ ಸಂಕಷ್ಟ ತಂದಿಟ್ಟಿದೆ.