ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಹೆಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿನ ಕಬಿನಿ ಡ್ಯಾಂಗೆ ನಟ ಶಿವರಾಜ್ ಕುಮಾರ್ ತಮ್ಮ ಪತ್ನಿ ಸಮೇತ ಭೇಟಿ ನೀಡಿದ್ದರು.
ಕಬಿನಿ ಡ್ಯಾಂನಲ್ಲಿ ಶಿವಣ್ಣ ಜೊತೆ ಫೋಟೊಗೆ ಅಭಿಮಾನಿಗಳು ಮುಗಿಬಿದ್ದರು. ರಸ್ತೆಯಲ್ಲಿ ಹೋಗುವಾಗ ಹಾಡಿ ಮಕ್ಕಳನ್ನ ಕಂಡು ಮಕ್ಕಳ ಜೊತೆ ಶಿವಣ್ಣ ದಂಪತಿ ಫೋಟೊ ತೆಗೆಸಿಕೊಂಡರು.
1986ರಲ್ಲಿ ‘ಆನಂದ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಶಿವಣ್ಣ ಎಂಟ್ರಿ ಕೊಟ್ಟರು. ಸಿನಿ ಜರ್ನಿಯಲ್ಲಿ 40 ವರ್ಷ ಪೂರೈಸಿದ್ದಾರೆ. ಕನ್ನಡದ ಜನಮಾನಸದಲ್ಲಿ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಆಗಿ ಉಳಿದಿದ್ದಾರೆ.