ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಅಮಾನತು ಆದ ಐಪಿಎಸ್ ಅಧಿಕಾರಿ ದಯಾನಂದ್ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲಾಧಿಕಾರಿ ದಯಾನಂದ್ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದು. ಭದ್ರತಾ ಲೋಪ, ಕರ್ತವ್ಯ ಲೋಪ ಸಂಬಂಧ ಪ್ರಶ್ನೆಗಳ ಸುರಿಮಳೆ ಕೇಳಿದ್ದಾರೆ.
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನಿಮಗೆ ಮಾಹಿತಿ ನೀಡಿದ್ದಾರಾ? ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಬರುತ್ತಾರೆ ಎಂದು ನಿರೀಕ್ಷೆ ಇತ್ತಾ? ಒಂದು ವೇಳೆ ನಿರೀಕ್ಷೆ ಇಟ್ಟಿದ್ದರೆ ಯಾಕೆ ನೀವು ಸರಿಯಾದ ರೀತಿ ಬಂದೋಬಸ್ತ್ ಮಾಡಲಿಲ್ಲ? ನೀವು ಆರ್ಸಿಬಿ ತಂಡಕ್ಕೆ ಅಥವಾ ಡಿಎನ್ಎ ತಂಡಕ್ಕೆ ನೋಟಿಸ್ ನೀಡಿದ್ದೀರಾ? ನಿಮಗೆ ಸಾವಿನ ಬಗ್ಗೆ ಯಾವಾಗ ತಿಳಿಯಿತು? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ.