ಕ್ರಿಕೆಟಿಗ ರಿಂಕು ಸಿಂಗ್ ಗೆ ಗುಡ್ ನ್ಯೂಸ್: ಸರ್ಕಾರಿ ನೌಕರಿ ನೀಡಿ ಗೌರವಿಸಿದ ಯೋಗಿ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಕ್ರಿಕೆಟಿಗ ರಿಂಕು ಸಿಂಗ್ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಇದೀಗ ರಿಂಕು ಸಿಂಗ್​ಗೆ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ಉದ್ಯೋಗ ನೀಡಿದೆ.

ವಾಸ್ತವವಾಗಿ ಯೋಗಿ ಸರ್ಕಾರವು ರಿಂಕು ಅವರನ್ನು ಮೂಲ ಶಿಕ್ಷಣ ಅಧಿಕಾರಿ ಹುದ್ದೆಗೆ ನೇಮಿಸಿದೆ (ಬಿಇಒ) ಎಂಬ ಸುದ್ದಿ ಹೊರಬಿದ್ದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಕ್ಕಾಗಿ ರಿಂಕು ಸಿಂಗ್ ಅವರಿಗೆ ರಾಜ್ಯ ಸರ್ಕಾರದಿಂದ ಈ ಹುದ್ದೆ ಮತ್ತು ಗೌರವ ದೊರೆತಿದೆ.

ವಾಸ್ತವವಾಗಿ 9ನೇ ತರಗತಿಯಲ್ಲಿ ಅನುತ್ತೀರ್ಣರಾಗಿರುವ ರಿಂಕು ಸಿಂಗ್​ಗೆ ಕ್ರೀಡಾ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಯೋಗಿ ಸರ್ಕಾರ ಅವರಿಗೆ ಕೆಲಸ ನೀಡಲು ನಿರ್ಧರಿಸಿದೆ. ಮೂಲ ಶಿಕ್ಷಣ ಅಧಿಕಾರಿಯಾಗಿ, ರಿಂಕು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡಬೇಕಾಗುತ್ತದೆ. ರಿಂಕು ಸಿಂಗ್ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದು, ಈಗ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡಲು ಅವಕಾಶ ಸಿಕ್ಕಿದೆ.

ಸರ್ಕಾರಿ ಕೆಲಸದಲ್ಲಿ ರಿಂಕು ಸಿಂಗ್ ಸಂಬಳ ಎಷ್ಟು?
ವರದಿಯ ಪ್ರಕಾರ, ಮೂಲ ಶಿಕ್ಷಣ ಅಧಿಕಾರಿಯಾಗಿ ರಿಂಕು ಸಿಂಗ್ ಅವರ ಮಾಸಿಕ ವೇತನ 57562- 61312 ರೂ.ಗಳವರೆಗೆ ಇರಬಹುದು. ಇದರಲ್ಲಿ ಅವರ ಮೂಲ ವೇತನ ಸುಮಾರು 47600 ರೂ.ಗಳಾಗಿರಬಹುದು. ರಿಂಕು ಸಿಂಗ್ ಪಡೆಯುವ ಸಂಬಳವು ಡಿಎ, ಎಚ್‌ಆರ್‌ಎ ಮತ್ತು ಪ್ರಯಾಣ ಭತ್ಯೆಯಂತಹ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ. ಇದರಲ್ಲಿ ಅವರ ಗ್ರೇಡ್ ಪೇ 4800 ರೂ.ಗಳಾಗಿರುತ್ತದೆ. ಇದು ಮಾತ್ರವಲ್ಲದೆ, ರಿಂಕು ಸಿಂಗ್ ಪಿಎಫ್ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಂತಹ ಯೋಜನೆಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!