ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಕಾನ್ಸ್ಟಾರ್ ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್ನಲ್ಲಿ ಸಿನಿಮಾ ತಯಾರಾಗ್ತಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಹೆಸರಿಡದ ಚಿತ್ರ ಇದಾಗಿದ್ದು, ಈ ತಂಡದಿಂದ ಅಚ್ಚರಿ ಸುದ್ದಿಯೊಂದು ಇದೀಗ ಹೊರಬಿದ್ದಿದೆ.
ವಿಶೇಷ ಅಂದ್ರೆ ಈ ಸಿನಿಮಾದ ವಿಎಫ್ಎಕ್ಸ್ಗಾಗಿಯೇ 350-400 ಕೋಟಿ ಖರ್ಚಾಗಲಿದೆಯಂತೆ. ಸನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.
ಸೂಪರ್ ಮ್ಯಾನ್ ಕಾನ್ಸೆಪ್ಟ್ನಲ್ಲಿ ರೆಡಿಯಾಗ್ತಿರುವ ಭಾರತೀಯ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳಿವೆ. ಪುಷ್ಪಾ ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾದ ಬಿಗ್ ಸಕ್ಸಸ್ನ ಬಳಿಕ ಅಲ್ಲು ಅರ್ಜುನ್ ಒಪ್ಪಿಕೊಂಡ ಸಿನಿಮಾ ಇದಾಗಿದ್ದು, ಈ ಚಿತ್ರದ ಮೇಲೆ ಫ್ಯಾನ್ಸ್ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.